ಪ್ರಗತಿವಾಹಿನಿ ಸುದ್ದಿ: ತಮಿಳುನಾಡಿನ ಕವರೈಪೇಟೈ ಸಮೀಪ ಮೈಸೂರು-ದರ್ಭಾಂಗ ಬಾಗ್ ಮತಿ ಎಕ್ಸ್‌ಪ್ರೆಸ್ ರೈಲು- ಗೂಡ್ಸ್ ರೈಲು ನಡುವೆ ಅಪಘಾತ ಸಂಭವಿಸಿದ ಒಂದು ದಿನದ ನಂತರ ವಿಧ್ವಂಸಕ ಕೃತ್ಯದ ಸಾಧ್ಯತೆ ಕುರಿತು ತನಿಖೆ ಮಾಡಲು ಎನ್‌ಐಎ, ಸರ್ಕಾರಿ ರೈಲ್ವೇ ಪೊಲೀಸ್ ಮತ್ತು ಆರ್‌ಪಿಎಫ್ ಪ್ರತ್ಯೇಕ ತನಿಖೆಯನ್ನು ಆರಂಭಿಸಿವೆ.
ಸಿಗ್ನಲಿಂಗ್ ಪಾಯಿಂಟ್‌ಗಳಲ್ಲಿ ನಟ್ ಗಳು ಕಾಣೆಯಾಗುವುದರೊಂದಿಗೆ ನಿರ್ಣಾಯಕ ಬೋಲ್ಟ್‌ಗಳು ಮತ್ತು ಬ್ರಾಕೆಟ್‌ಗಳು ತೆರೆದಿರುವುದು ಕಂಡುಬಂದಿದೆ ಎಂದು ಮೂಲಗಳು ತಿಳಿಸಿವೆ.1,800 ಪ್ರಯಾಣಿಕರು ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಅಪಘಾತ ಸಂಭವಿಸಿದೆ, ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಪ್ಯಾಸೆಂಜರ್ ರೈಲಿಗೆ ಮುಖ್ಯ ಮಾರ್ಗದಲ್ಲಿ ಹಸಿರು ನಿಶಾನೆ ನೀಡಲಾಗಿತ್ತು. ಆದರೆ ಅದು ಲೂಪ್ ಲೈನ್ ಪ್ರವೇಶಿಸಿದ ಪರಿಣಾಮ ಸರಕು ರೈಲಿಗೆ ಡಿಕ್ಕಿ ಸಂಭವಿಸಿದೆ ಎಂದು ರೈಲ್ವೆ ಮಂಡಳಿ ಹೇಳಿದೆ. ಟ್ರ್ಯಾಕ್‌ಗಳು, ಪಾಯಿಂಟ್‌ಗಳು ಮತ್ತು ಬ್ಲಾಕ್‌ಗಳು, ಸಿಗ್ನಲ್‌ಗಳು, ಸ್ಟೇಷನ್ ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್ ಸಿಸ್ಟಮ್, ಕಂಟ್ರೋಲ್ ಪ್ಯಾನಲ್ ಮತ್ತಿತರ ಮಹತ್ವದ ಸುರಕ್ಷತೆ, ಸಿಗ್ನಲ್ ಮತ್ತು ಕಾರ್ಯಾಚರಣೆಯ ಅಂಶಗಳ ಕುರಿತು ಸಂಪೂರ್ಣವಾಗಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ದಕ್ಷಿಣ ವೃತ್ತದ ರೈಲ್ವೆ ಸುರಕ್ಷತಾ ಆಯುಕ್ತ ಎ ಎಂ ಚೌಧರಿ ಅವರು ಹೇಳಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ