ಬೆಳಗಾವಿಯಲ್ಲಿ ಏಕಾಏಕಿ ಬೆಂಕಿಯಿಂದ ಹೊತ್ತಿ ಉರಿದ ಮರ; ಜನರಲ್ಲಿ ಆತಂಕ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ರಾತ್ರಿ ವೇಳೆ ಏಕಾ ಏಕಿ ಬೆಂಕಿ ಹೊತ್ತಿಕೊಂಡು ಮರವೊಂದು ಹೊತ್ತಿ ಉರಿದಿದ್ದು, ಬೆಳಗಾವಿಯ ಟಿಳಕವಾಡಿ ಜನರು ಆತಂಕಕ್ಕೊಳಗಾದರು.
ಟಿಳಕವಾಡಿಯ ಶಾಂತಿ ಕಾಲೋನಿಯಲ್ಲಿ ರಾತ್ರಿ 8 ಗಂಟೆ ಹೊತ್ತಿಗೆ ಮರವೊಂದು ಧಗ ಧಗನೆ ಉರಿಯಲಾರಂಭಿಸಿತು. ಸುತ್ತಲಿನ ಜನರೆಲ್ಲ ಆತಂಕದಿಂದ ನೋಡುತ್ತಿದ್ದಂತೆ ಇಡೀ ಮರಕ್ಕೆ ಬೆಂಕಿ ಆವರಿಸಿತು. ಸ್ಥಳೀಯ ನಿವಾಸಿಗಳಾದ, ಜಿಐಟಿ ಕಾಲೇಜಿನ ಉಪನ್ಯಾಸಕ ಡಾ.ಗೋವಿಂದ ರಾಜ ಮಾನೆ ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. 15 ನಿಮಿಶದಲ್ಲಿ ಅವರು ಸ್ಥಳಕ್ಕೆ ಆಗಮಿಸಿದರು.
ಮರ ಹಾಗೂ ಸುತ್ತಲಿನ ಪ್ರದೇಶ ಸುಟ್ಟು ಕರಕಲಾಗಿದೆ. ಆದರೆ ಯಾವುದೇ ಪ್ರಾಣಾಪಾಯ ಅಥವಾ ಹೆಚ್ಚಿನ ಹಾನಿಯಾಗಿಲ್ಲ.
ಏಕಾ ಏಕಿ ಮರ ಹೊತ್ತಿ ಉರಿಯಲು ಕಾರಣ ಗೊತ್ತಾಗಲಿಲ್ಲ. ಸುತ್ತಲೂ ಹಾಕಿದ್ದ ತ್ಯಾಜ್ಯಗಳಿಗೆ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿರಬಹುದು ಎಂದು ಶಂಕಿಸಲಾಗಿದೆ. ನಗರದ ಮಹಾಂತೇಶ ನಗರ ಪ್ರದೇಶದಲ್ಲಿ ಪದೇ ಪದೆ ಇಂತಹ ದುಷ್ಕೃತ್ಯಗಳು ನಡೆಯುತ್ತವೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ