ಪ್ರಗತಿವಾಹಿನಿ ಸುದ್ದಿ : ಅಪರೂಪದ ಬೆಳವಣಿಗೆ ಎಂಬಂತೆ ಮಂಗಳೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಎರಡು ಗಂಡು ಹಾಗೂ ಎರಡು ಹೆಣ್ಣು ಮಕ್ಳಳಿಗೆ ಮಹಿಳೆಯೊಬ್ಬರು ಜನ್ಮ ನೀಡಿದ್ದಾರೆ.
ತೆಲಂಗಾಣ ಮೂಲದ ತೇಜ ಎಂಬುವವರ ಪತ್ನಿ ಬಾನೋತ್ ದುರ್ಗಾ ಎಂಬುವವರು ನಾಲ್ವರು ಮಕ್ಕಳಿಗೆ ಜನ್ಮ ನೀಡಿದ್ದು, ಆ ಪೈಕಿ 2 ಗಂಡು, ಮತ್ತೆರಡು ಹೆಣ್ಣು ಮಕ್ಕಳಿವೆ. 30 ವಾರಗಳ ಹೆರಿಗೆಯಾಗಿದ್ದು, ಇದು ಅಪರೂಪ. ಪ್ರಸವ ಪೂರ್ವ ಜನನವಾದ್ದರಿಂದ ಸದ್ಯ ಮಕ್ಕಳಿಗೆ ಎನ್‌ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದು ನ್ಯಾಚೂರಲ್ ಪ್ರೆಗ್ನೆನ್ಸಿ ಕೇಸ್ ಆಗಿದೆ.
ಇದು ಅಪರೂಪದ ಘಟನೆಯಾಗಿದ್ದು, 7 ಲಕ್ಷ ಗರ್ಭಧಾರಣೆಗಳಲ್ಲಿ ಒಬ್ಬರಲ್ಲಿ ಈ ರೀತಿ ಹೆರಿಗೆಯಾಗುತ್ತದೆ. ಇನ್ನು ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಲಾಗಿದ್ದು, ತಾಯಿ ಸೇರಿಂದ ನಾಲ್ಕೂ ಮಕ್ಕಳು ಆರೋಗ್ಯವಾಗಿದ್ದಾರೆ. ಬೆಂಗಳೂರಿನಲ್ಲಿ 10 ವರ್ಷಗಳ ಹಿಂದೆ ಹಾಗೂ 14 ವರ್ಷಗಳ ಹಿಂದೆ ಕೆಎಂಸಿಯಲ್ಲಿ ಇಂತಹ ಅಪರೂಪದ ಹೆರಿಗೆ ಆಗಿದ್ದವು ಎಂದು ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ.ಜೋಯ್ಲಿನ್ ಡಿ.ಅಲ್ನೋಡಾ ಹೇಳಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ