
ಪ್ರವಾಹದಲ್ಲಿ ಕೊಚ್ಚಿ ಹೋದ ಮಹಿಳೆ
ಪ್ರಗತಿವಾಹಿನಿ ಸುದ್ದಿ, ನಂದೇಶ್ವರ (ಅಥಣಿ) –
ಕೃಷ್ಣಾ ನದಿ ಪ್ರವಾಹಕ್ಕೆ ಮತ್ತೋರ್ವ ಮಹಿಳೆ ಬಲಿಯಾಗಿದ್ದಾಳೆ.
ಸಮೀಪದ ಜನವಾಡ ಗ್ರಾಮದ ಶೋಭಾ ಬಾಳಪ್ಪ ಸುತಾರ (ವಯಸ್ಸು ೪೦ ವರ್ಷ) ಕೃಷ್ಣಾ ನದಿಯಲ್ಲಿ ಕಾಲು ಜಾರಿ ಪ್ರವಾಹಕ್ಕೆ ಸಿಲುಕಿ ಶನಿವಾರ ನೀರು ಪಾಲಾಗಿದ್ದಾರೆ.
ಹಲವು ದಿನಗಳಿಂದ ಗಂಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ಶೋಭಾ ಅವರು ಮನೆ ಸ್ವಚ್ಚ ಮಾಡಿ ಬದುಕು ಪುನಃ ಕಟ್ಟಿಕೊಳ್ಳಲು ಪ್ರಾರಂಭಿಸಿದ್ದರು. ಶನಿವಾರ ಮತ್ತೆ ಪ್ರವಾಹ ಬರಬಹುದೆಂದು ತಮ್ಮ ಮನೆಯ ಸಾಮಗ್ರಿಗಳನ್ನು ಬೆರೆಡೆಗೆ ಸಾಗಿಸುವಾಗ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿಕೊಂಡು ಹೋಗಿದ್ದಾರೆ. ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ಜಿಲ್ಲೆಯ ಪ್ರವಾಹಬಾಧಿತ ಸ್ಥಳಗಳಿಗೆ ಈಶ್ವರಪ್ಪ ಭೇಟಿ, ಹಾನಿ ಪರಿಶೀಲನೆ
ಕೃಷ್ಣಾ ತೀರದಲ್ಲಿ ಜೋಡಿ (?) ಶವ ಪತ್ತೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ