ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಸರ್ಕಾರದ CoWIN ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿದ್ದ ಭಾರತೀಯರ ವೈಯಕ್ತಿಕ ಮಾಹಿತಿಯು ಟೆಲಿಗ್ರಾಮ್ ಅಪ್ಲಿಕೇಶನ್‌ನಲ್ಲಿ ಸೋರಿಕೆಯಾಗಿರುವುದು ಬೆಳಕಿಗೆ ಬಂದಿದೆ.
ವ್ಯಕ್ತಿಯ ಫೋನ್ ಸಂಖ್ಯೆಯನ್ನು ನಮೂದಿಸಿದಾಗ, ಟೆಲಿಗ್ರಾಮ್ ಬಾಟ್ ನೋಂದಾಯಿತ ವ್ಯಕ್ತಿಯ ಹೆಸರು, ಆಧಾರ್, ಪ್ಯಾನ್ ಅಥವಾ ಪಾಸ್‌ಪೋರ್ಟ್ ಐಡಿ ಸಂಖ್ಯೆ, ಲಿಂಗ ಮತ್ತು ಜನ್ಮ ವರ್ಷದೊಂದಿಗೆ ಪ್ರತಿಕ್ರಿಯಿಸುತ್ತದೆ ಎಂದು ವರದಿಯೊಂದು ತಿಳಿಸಿದೆ.
ಟಿಎಂಸಿಯ ಸಾಕೇತ್ ಗೋಖಲೆ ಅವರು ಟೆಲಿಗ್ರಾಮ್‌ನಿಂದ ರಾಜಕೀಯ ನಾಯಕರ ಸೋರಿಕೆ ಡೇಟಾವನ್ನು ತೋರಿಸುವ ಸ್ಕ್ರೀನ್‌ಶಾಟ್‌ಗಳನ್ನು ಟ್ವೀಟ್ ಮಾಡಿದ್ದಾರೆ.
ಈ ಹಿಂದೆ ಕೋವಿಡ್ ಸಂದರ್ಭದಲ್ಲಿ ಲಸಿಕೆಗಾಗಿ ಸ್ಲಾಟ್ ಗಳನ್ನು ಬುಕ್ ಮಾಡಲು ಅನೇಕ ಜನ ಕೋವಿನ್ ನಲ್ಲಿ ತಮ್ಮ ಮೊಬೈಲ್ ಗಳ ಮೂಲಕ ನೋಂದಾಯಿಸಿದ್ದರು. ಒಂದೇ ಮೊಬೈಲ್ ಸಂಖ್ಯೆಯಲ್ಲಿ ಕುಟುಂಬದ ಹಲವರ ವಿವರಗಳನ್ನು ನೋಂದಾಯಿಸಿದ್ದು, ಟೆಲಿಗ್ರಾಮ್ ಬಾಟ್ ಈ ವಿವರಗಳನ್ನು ಒಂದೇ ಬಾರಿಗೆ ತೋರಿಸುತ್ತಿರುವುದು ಕಂಡುಬಂದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ