Kannada NewsKarnataka NewsLatest

*ಲಂಚ ಪಡೆದು ಪರಾರಿಯಾಗಲು ಯತ್ನ: ಅಧಿಕಾರಿಯನ್ನು ಚೇಸ್ ಮಾಡಿ ಹಿಡಿದ ಲೋಕಾಯುಕ್ತ ಅಧಿಕಾರಿಗಳು*

ಪ್ರಗತಿವಾಹಿನಿ ಸುದ್ದಿ: ಲಂಚ ಪಡೆದು ಪರಾರಿಯಾಗುತ್ತಿದ್ದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಯನ್ನು ಲೋಕಾಯುಕ್ತ ಅಧಿಕಾರಿಗಳು ಚೇಸ್ ಮಾಡಿ ಬಂಧಿಸಿರುವ ಘಟನೆ ನಡೆದಿದೆ.

ರಾಯಚೂರು ಜಿಲ್ಲೆಯ ಸಿರಿವಾರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸುರೇಶ್ ಶೆಟ್ಟಿ ಬಂಧಿತ ಅಧಿಕಾರಿ. ಈ- ಖಾತೆ ಮಾಡಿಕೊಡಲು ಸುರೇಶ್ ಶೆಟ್ಟಿ ರಾಘವೇಂದ್ರ ರೆಡ್ಡಿ ಎಂಬುವವರಿಗೆ 2 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅದರಂತೆ 1 ಲಕ್ಷ ರೂ ಕ್ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.

ಲೋಕಾಯುಕ್ತ ಅಧಿಕಾರಿಗಳು ಬರುತ್ತಿದ್ದಂತೆ ಪರಾರಿಯಾಗಿತ್ತಿದ್ದ ಸುರೇಶ್ ಶೆಟ್ಟಿಯನ್ನು ಅಧಿಕಾರಿಗಳು ಕಾರಿನಲ್ಲಿ ಚೇಸ್ ಮಾಡಿ ಸಿನಿಮೀಯ ರೀತಿಯಲ್ಲಿ ಬಂಧಿಸಿದ್ದಾರೆ. ಲೋಕಾಯುಕ್ತ ಎಸ್ ಪಿ ಸಿದ್ದರಾಜು ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.


Related Articles

Back to top button