Kannada NewsKarnataka NewsLatest

*BREAKING: ಪ್ರವಾಸಕ್ಕೆ ಬಂದು ನಾಪತ್ತೆಯಾಗಿದ್ದ ಕೇರಳದ ಶ್ರೀನಂದಾ ಮಾಣಿಕ್ಯಧಾರಾದಲ್ಲಿ ಶವವಾಗಿ ಪತ್ತೆ*

ಪ್ರಗತಿವಾಹಿನಿ ಸುದ್ದಿ: ಪೋಷಕರು ಹಾಗೂ ಸಂಬಂಧಿಕರೊಂದಿಗೆ ಪ್ರವಾಸಕ್ಕೆ ಬಂದಿದ್ದ ಕೇರಳ ಮೂಲದ ಶ್ರೀನಂದಾ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಶವ ಚಿಕ್ಕಮಗಳುರಿನ ಮಾಣಿಕ್ಯಧಾರದಲ್ಲಿ ಪತ್ತೆಯಾಗಿದೆ.

ಚಿಕ್ಕಮಗಳೂರಿನ ಮಾಣಿಕ್ಯಧಾರಾದಲ್ಲಿ ಬಾಲಕಿ ಶ್ರೀನಂದಾ (14) ಶವವಾಗಿ ಪತ್ತೆಯಾಗಿದ್ದಾಳೆ. ಏಪ್ರಿಲ್ ೭ರಂದು ಕೇರಳಿಂದ ಚಿಕ್ಕಮಗಳೂರಿನ ಪ್ರಸಿದ್ಧ ತಾಣಗಳಿಗೆ ಪ್ರವಾಸಕ್ಕೆ ಬಂದಿದ್ದ ಶ್ರೀನಂದಾ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಳು. ಕಳೆದ ನಾಲ್ಕು ದಿನಗಳಿಂದ ಆಕೆಗಾಗಿ ಶೋಧಕಾರ್ಯ ನಡೆಸಲಾಗುತ್ತಿತ್ತು. ಇದೀಗ ಮಾಣಿಕ್ಯಧಾರದಲ್ಲಿ ಶ್ರೀನಂದಾ ಮೃತದೇಹ ಪತ್ತೆಯಾಗಿದೆ.

ಮಾಣಿಕ್ಯಧಾರದ 2 ಸಾವಿರ ಅಡಿಯಲ್ಲಿ ಬಾಲಕಿ ಶ್ರೀನಂದಾ ಶವ ಪತ್ತೆಯಾಗಿದೆ. ಎಸ್ ಡಿ ಆರ್ ಎಫ್, ಅಗ್ನಿಶಾಮಕ ಸಿಬ್ಬಂದಿ, ಪೊಲೀಸ್ ತಂಡದಿಂದ ಶವ ಪತ್ತೆಯಾಗಿದೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button