ತುರ್ತಾಗಿ 150 ಕೋಟಿ ರೂ. ಕೊಡಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಬೆಳಗಾವಿ ನಗರಕ್ಕೆ ತುರ್ತಾಗಿ 150 ಕೋಟಿ ರೂ. ವಿಶೇಷ ಅನುದಾನ ನೀಡುವಂತೆ ಶಾಸಕ ಅಭಯ ಪಾಟೀಲ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಳಿ ಬೇಡಿಕೆ ಸಲ್ಲಿಸಿದ್ದಾರೆ.
ಇಂದು ಬೆಳಗ್ಗೆ ಮುಖ್ಯಮಂತ್ರಿಯನ್ನು ಭೇಟಿಯಾದ ಅಭಯ ಪಾಟೀಲ, ಬೆಳಗಾವಿ ನಗರದ ರಸ್ತೆಗಳು ಮಳೆಯಿಂದಾಗಿ ಹಾಳಾಗಿವೆ. ಇಂದರಿಂದಾಗಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ರಸ್ತೆಗಳ ಹೊಂಡ ಮುಚ್ಚಬೇಕಿದೆ. ಒಟ್ಟಾರೆ ಬೆಳಗಾವಿ ನಗರಕ್ಕೆ 150 ಕೋಟಿ ರೂ. ವಿಶೇ, ಅನುದಾನ ನೀಡಿದರೆ ಬಾಕಿ ಇರುವ ಕೆಲಸಗಳನ್ನು ಪೂರ್ಣಗೊಳಿಸಲು ಸಹಾಯವಾಗಲಿದೆ ಎಂದು ವಿನಂತಿಸಿದರು.
ತಕ್ಷಣಸ್ಪಂದಿಸಿದ ಯಡಿಯೂರಪ್ಪ, ಈ ಪ್ರಸ್ತಾವನೆಯನ್ನು ಸಚಿವಸಂಪುಟದ ಮುಂದೆ ಮಂಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕೆಲವೇ ದಿನದ ಹಿಂದೆ ಅಭಯ ಪಾಟೀಲ ಅವರು ಅಂದಿನ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಅವರನ್ನು ಭೇಟಿಯಾಗಿ ಬೆಳಗಾವಿಗೆ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಕೋರಿದ್ದರು. ಆದರೆ ಮೈತ್ರಿ ಸರಕಾರ ಪತನವಾಗಿದ್ದರಿಂದ ಆ ಪ್ರಸ್ತಾವನೆ ಹಾಗೆಯೇ ಉಳಿದುಕೊಂಡಿತು.
ಇದೀಗ ನೂತನ ಮುಖ್ಯಮಂತ್ರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲೇ ಬೆಳಗಾವಿ ನಗರಕ್ಕೆ 100 ಕೋಟಿ ರೂ. ವಿಶೇಷ ಅನುದಾನ ನೀಡುವ ಸಂಪ್ರದಾಯ ಆರಂಭಿಸಿದ್ದರು. 4 ಕಂತುಗಳಲ್ಲಿ ಅನುದಾನ ಬಂದರೂ ನಂತರ ಅದು ಸ್ಥಗಿತವಾಗಿತ್ತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ