
ಪ್ರವತಿವಾಹಿನಿ ಸುದ್ದಿ: ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಗದಗ ಗ್ರಾಮೀಣ ಪೊಲೀಸ್ ಠಾಣೆ ಸಿಪಿಐ ಎಂ.ಎಂ ನದಾಫ್ ಅವರನ್ನು ಅಮಾನತು ಮಾಡಲಾಗಿದೆ ಎಂದು ಗದಗ ಪೊಲೀಸ್ ವರಿಷ್ಠಾಧಿಕಾರಿ ಬಿಎಸ್ ನೇಮಗೌಡ ಆದೇಶ ಹೋರಡಿಸಿದ್ದಾರೆ.
ನೊಂದವರ ಮೇಲೆ ದೌರ್ಜನ್ಯ ಹಾಗೂ ಲಂಚ ಪಡೆದಿರುವ ಆರೋಪ ಎದುರಿಸುತ್ತಿರುವ ಸಿಪಿಐ ನದಾಫ್ ಅವರ ಮೇಲೆ ನೊಂದ ಕುಟುಂಬ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ.
ಶುಕ್ರವಾರ ಎಸ್ಪಿ ಕಚೇರಿ ಬಳಿ ಅಡವಿಸೋಮಾಪುರ ಎಂಬವರ ಕುಟುಂಬಸ್ಥರು ಫೇರಾವ್ ಹಾಕಿದ್ದರು. ಆದರೆ ಸಿಪಿಐ ಅವರು ಹಲ್ಲೆ ಮಾಡಿದವರ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿದ್ದರು. ಜಿಮ್ಸ್ ಬಳಿಯ ಮೆಡಿಕಲ್ ಶಾಪ್ ಮೇಲಿನ ದಾಳಿ, ಅಡವಿಸೋಮಾಪೂರ ಸಣ್ಣ ತಾಂಡಾದಲ್ಲಿ ಮನೆಗಳಿಗೆ ನುಗ್ಗಿ ಹಲ್ಲೆ ಪ್ರಕರಣಗಳನ್ನು ನಿಭಾಯಿಸುವಲ್ಲಿ ಕರ್ತವ್ಯ ಲೋಪ ಹಾಗೂ ಲಂಚ ಪಡೆದ ಆರೋಪ ಸೇರಿ ಹಲವಾರು ಪ್ರಕರಣಗಳಲ್ಲಿ ನಿರ್ಲಕ್ಷ್ಯ ಆರೋಪಗಳ ಹಿನ್ನೆಲೆಯಲ್ಲಿ ಅಮಾನತು ಮಾಡಿ ಆದೇಶಿಸಲಾಗಿದೆ. ಇಲಾಖೆ ತನಿಖೆಗೂ ಮೇಲಾಧಿಕಾರಿಗಳಿಗೆ ವರದಿ ಕಳಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ