Cancer Hospital 2
Beereshwara 36
LaxmiTai 5

*ಇಂದು ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಕುಮಾರಸ್ವಾಮಿ; ಸಂಸದ ಡಾ.ಮಂಜುನಾಥ್ ಮಾಹಿತಿ*

Anvekar 3
GIT add 2024-1

ಪ್ರಗತಿವಾಹಿನಿ ಸುದ್ದಿ: ನರೇಂದ್ರ ಮೋದಿ ಇಂದು ಮೂರನೇ ಬಾರಿಗೆ ದೇಶದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದು, ಕ್ಷಣಗಣನೆ ಆರಂಭವಾಗಿದೆ. ರಾಷ್ಟ್ರಪತಿ ಭವನದಲ್ಲಿ ಸಂಜೆ 7 ಗಂಟೆಗೆ ಪದಗ್ರಹಣ ನಡೆಯಲಿದೆ. ಈ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ ಸೇರಿದಂತೆ ಹಲವು ನೂತನ ಸಂಸದರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

Emergency Service

ಈ ಬಗ್ಗೆ ಮಾತನಾಡಿರುವ ನೂತನ ಸಂಸದ ಡಾ.ಮಂಜುನಾಥ್, ಇದೊಂದು ಐತಿಹಾಸಿಕ ಹಾಗೂ ಸಂತೋಷದ ದಿನ. ಮೋದಿಯವರು ಮೂರನೇ ಬಾರಿ ಪ್ರಧಾನಿಯಾಗುತ್ತಿರುವುದು ಖುಷಿ ತಂದಿದೆ. ಇದರ ಜೊತೆಗೆ ಕುಮಾರಸ್ವಾಮಿಯವರು ಇಂದು ಕೇಂದ್ರ ಸಚಿವರಾಗಿ ಪ್ರಮಣವಚನ ಸ್ವೀಕರಿಸಲಿದ್ದಾರೆ ಎಂದರು.

ಕುಮಾರಸ್ವಾಮಿಯವರು ಕ್ಯಾಬಿನೆಟ್ ದರ್ಜೆಯ ಮಂತ್ರಿಯಾಗಿ ಪ್ರಮಣ ವಚನ ಸ್ವೀಕರಿಸಲಿದ್ದಾರೆ ಎಂಬುದು ಸಂತಸದ ವಿಚಾರ. ಜೆಡಿಎಸ್ ಪಕ್ಷದ ನಾಯಕರು, ಕಾರ್ಯಕರ್ತರಿಗೆ ಆತ್ಮವಿಶ್ವಾಸ ಹೆಚ್ಚಲಿದೆ. ರಾಜ್ಯದ ಅಭಿವೃದ್ಧಿಗೂ ಪೂರಕವಾದ ಬೆಳವಣಿಗೆ ಇದು ಎಂದರು.

Bottom Add3
Bottom Ad 2