Kannada NewsKarnataka NewsLatest

ರೋಗನಿರೋಧಕ ಔಷಧಿ ತಯಾರಿಸಿ ಉಚಿತವಾಗಿ ವಿತರಿಸಿದ ಎಬಿವಿಪಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ದೇಶಾದ್ಯಂತ ಕೊರೊನಾ ಮಹಾಮಾರಿ ವ್ಯಾಪಕವಾಗಿ ಹರಡಿರುವುದರಿಂದ ಇದರ ವಿರುದ್ಧ ಹೋರಾಡಲು ಮನುಷ್ಯನ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಹೋಮಿಯೋಪತಿ ಮಾತ್ರೆಗಳನ್ನು ನುರಿತ ವೈದ್ಯರಿಂದ ಮಾಹಿತಿ ಪಡೆದು ಹೋಮಿಯೋಪತಿ ಮಾತ್ರೆಗಳನ್ನು ಸಿದ್ಧ ಪಡಿಸಿ ಬೆಳಗಾವಿಯಾದ್ಯಂತ ಉಚಿತವಾಗಿ ಮಾತ್ರೆಗಳನ್ನು ನೀಡುವ ನಿಟ್ಟಿನಲ್ಲಿ ಯೋಜನೆಯನ್ನು ರೂಪಿಸಲಾಗಿದೆ.
 ಇಂದು ಅ.ಭಾ.ವಿ.ಪ ಬೆಳಗಾವಿ ನಗರದ ಕಾರ್ಯಕರ್ತರು, ಬೆಳಗಾವಿ ಅ.ಭಾ.ವಿ.ಪ. ಸ್ವರಾಜ್ಯ ಕಾರ್ಯಾಲಯದಲ್ಲಿ ಮಾತ್ರೆಗಳನ್ನು ಸಿದ್ಧ ಪಡಿಸುತ್ತಿದ್ದು, ಮನೆಮನೆಗೆ ತೆರಳಿ ಹೋಮಿಯೋಪತಿಕ್ ಮಾತ್ರೆಗಳನ್ನು ನೀಡಿ ಜನತೆಯಲ್ಲಿ ಕೊರೊನಾ ಜಾಗೃತಿ ಹಾಗೂ ಭಯವನ್ನು ಹೋಗಲಾಡಿಸುವ ಕೆಲಸದಲ್ಲಿ ಬೆಳಗಾವಿಯ ಅ.ಭಾ.ವಿ.ಪ ಕಾರ್ಯಕರ್ತರು ನಿರತರಾಗಿದ್ದಾರೆ.

ಈ ಅಭಿಯಾನದಲ್ಲಿ ಉಪಸ್ಥಿತರಿದ್ದ ಡಾ. ಆನಂದ ಹೊಸೂರ ಪ್ರಾಂತ ಉಪಾಧ್ಯಕ್ಷರು, ಕರ್ನಾಟಕ ಹಾಗೂ ರಾಜ್ಯ ಸಹ ಸಂಘಟನಾ ಕಾರ್ಯದರ್ಶಿ ಪೃಥ್ವಿಕುಮಾರ, ಕಾರ್ಯಕರ್ತರಾದ ರೋಹಿತ ಉಮನಾಬಾದಿಮಠ, ಶಿವಾನಂದ ಕಾಂಬಳೆ, ಕಿರಣ ದುಕಾಂದಾರ, ಅನುದೀಪ ಕುಲಕರ್ಣಿ, ಪೂಜಾ ಕಲಘಟಗಿ, ಪ್ರಜ್ಞಾ, ಅಶ್ವಿನಿ ಕಂಚಿ, ಶುಭಂ, ಅಶ್ವಿನ್, ಭೂಷಣ, ಕಾರ್ತಿಕ್ ಮೊದಲಾದವರು ಇದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button