Latest
87 ಕೋಟಿ ಹೆಚ್ಚುವರಿ ಆಸ್ತಿ; ಅಗತ್ಯ ದಾಖಲೆ ಒದಗಿಸಲು ಜಮೀರ್ ಅಹಮ್ಮದ್ ಗೆ ಎಸಿಬಿ ನೋಟಿಸ್

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ದಾಳಿ ಸಂದರ್ಭದಲ್ಲಿ ಪತ್ತೆಯಾದ 87 ಕೋಟಿ ರೂ. ಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸುವಂತೆ ಶಾಸಕ ಜಮೀರ್ ಅಹಮ್ಮದ್ ಖಾನ್ ಗೆ ಎಸಿಬಿ ನೋಟಿಸ್ ಜಾರಿಮಾಡಿದೆ.
ಶಾಸಕ ಜಮೀರ್ ಅಹಮ್ಮದ್ ಮನೆಯ ಮೇಲೆ ಎಸಿಬಿ ದಾಳಿ ನಡೆಸಿದ ಸಂದರ್ಭದಲ್ಲಿ ಆದಾಯಕ್ಕಿಂತ 87 ಕೋಟಿ ರೂ. ಹೆಚ್ಚುವರಿ ಆಸ್ತಿ ಇರುವುದು ಪತ್ತೆಯಾಗಿತ್ತು. ದಾಳಿಯ ಮರುದಿನವೇ ಎಸಿಬಿ ದಾಖಲೆಗಳನ್ನು ನೀಡುವಂತೆ ಜಮೀರ್ ಅಹಮ್ಮದ್ ಅವರಿಗೆ ಕೇಳಿತ್ತಾದರೂ ಬಕ್ರೀದ್ ಹಬ್ಬವಿರುವ ಕಾರಣ ದಾಖಲೆ ಒದಗಿಸಲು ಕಾಲಾವಕಾಶ ನೀಡಬೇಕೆಂದು ಎಸಿಬಿಗೆ ಕೋರಿದ್ದರು.




