Latest

ನೀರಿನಲ್ಲಿ ಕೊಚ್ಚಿ ಹೋಗಿದ್ದ ಕಾರು; 3 ದಿನಗಳ ಬಳಿಕ ಇಬ್ಬರ ಮೃತದೇಹ ಪತ್ತೆ

ಪ್ರಗತಿವಾಹಿನಿ ಸುದ್ದಿ; ದಕ್ಷಿಣ ಕನ್ನಡ: ಭಾರಿ ಮಳೆಯ ನಡುವೆಯೇ ವೇಗವಾಗಿ ಬಂದ ಕಾರು ಸೇತುವೆಯಿಂದ ನದಿಗೆ ಬಿದ್ದು ಕೊಚ್ಚಿ ಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ದಿನಗಳ  ಬಳಿಕ ಕಾರಿನಲ್ಲಿದ್ದ ಇಬ್ಬರ ಶವ ಪತ್ತೆಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಕಾಣಿಯೂರು ಬಳಿ ಎರದು ದಿನಗಳ ಹಿಂದೆ ಸೇತುವೆ ಮೇಲೆ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಕಾರೊಂದು ಸೇತುವೆಯ ಮೇಲಿಂದ ನದಿಗೆ ಬಿದ್ದು ನೀರಿನ ರಭಸಕ್ಕೆ ಕೊಚ್ಚಿ ಹೋಗಿತ್ತು. ಕಾರಿನಲ್ಲಿದ್ದವರ ಪತ್ತೆಗಾಗಿ ಎನ್ ಡಿ ಆರ್ ಎಸ್ ತಂಡ, ಪೊಲೀಸರು ಮೂರು ದಿನಗಳಿಂದ ಶೋಧ ಕಾರ್ಯ ನಡೆಸಿದ್ದರು.

Home add -Advt

ನಿನ್ನೆ ಹೊಳೆಯಲ್ಲಿ ಕಾರು ಪತ್ತೆಯಾಗಿತ್ತು. ಆದರೆ ಕಾರಿನಲ್ಲಿದ್ದವರ ಸುಳಿವು ಸಿಕ್ಕಿರಲಿಲ್ಲ. ಇದೀಗ ಕಾರು ನದಿಗೆ ಬಿದ್ದ 250 ಮೀಟರ್ ದೂರದಲ್ಲಿ ಕಲ್ಲು ಬಂಡಗಳ ನಡುವೆ ಇಬ್ಬರ ಶವ ಪತ್ತೆಯಾಗಿದೆ.
ಚಾರ್ಮಡಿ ಘಾಟ್ ನಲ್ಲಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು

ಭಾರಿ ಮಳೆಗೆ ಕುಸಿದು ಬಿದ್ದ ಮನೆ ಗೋಡೆ; ತಾಯಿ-ಮಗಳು ದುರ್ಮರಣ

Related Articles

Back to top button