ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – 10 ಸಾವಿರ ರೂ. ಲಂಚ ಸ್ವೀಕರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಡಚಿ ಎಪಿಎಂಸಿ ಕಾರ್ಯದರ್ಶಿಗೆ ನ್ಯಾಯಾಲಯ 7 ವರ್ಷ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
4ನೇ ಅಧಿಕ ಜಿಲ್ಲಾ ಸತ್ರ ಮತ್ತು ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಎನ್.ವಿ.ವಿಜಯ ಅವರು ವಿಚಾರಣೆ ನಡೆಸಿ ಆರೋಪಿ ಸುರಪ್ಪ ಹಾಂಕಪ್ಪ ಲಮಾಣಿಗೆ ಶಿಕ್ಷೆೆ ವಿಧಿಸಿದ್ದಾರೆ.
ಕಲಂ.7 ಪಿಸಿ ಕಾಯ್ದೆ 1988 ರಲ್ಲಿ 03 ವರ್ಷ ಕಠಿಣ ಕಾರಾಗೃಹ ಶಿಕ್ಷೆ ರೂ.5000/- ದಂಡ ಒಂದು ವೇಳೆ ದಂಡ ಕಟ್ಟಲು ತಪ್ಪಿದರೆ 2 ತಿಂಗಳು ಸಾದಾ ಕಾರಾಗೃಹ ಶಿಕ್ಷೆ ಹಾಗೂ ಕಲಂ.13(1)(ಡಿ) ಸಹ ಕಲಂ.13(2) ಪಿಸಿ ಕಾಯ್ದೆ-1988 ನೇದ್ದರಡಿಯಲ್ಲಿ 04 ವರ್ಷ ಕಠಿಣ ಕಾರಾಗೃಹ ಶಿಕ್ಷೆ ರೂ.10,000/- ದಂಡ ಒಂದು ವೇಳೆ ದಂಡ ಕಟ್ಟಲು ತಪ್ಪಿದರೆ 03 ತಿಂಗಳು ಸಾದಾ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ.
ದಿನಾಂಕ : 24.12.2016 ರಂದು ಫಿರಾದುದಾರರಾದ ಮಹಾದೇವ ಸುರೇಶ ಚೌಗಲೆ, ಸಾ ಜಲಾಲಪೂರ ತಾ ರಾಯಭಾಗ ಜೆ ಬೆಳಗಾವಿ ರವರಿಗೆ ಸುರಪ್ಪ ಹಾಂಕಪ್ಪ ಲಮಾಣಿ, ಕಾರ್ಯದರ್ಶಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಕುಡಚಿ ರವರು ರಫ್ತುದಾರರ ಮತ್ತು ಸಂಗ್ರಹಣಕಾರರ ಲೈಸನ್ಸ್ ನೀಡಲು ರೂ.10,000/- ಲಂಚದ ಹಣಕ್ಕೆ ಬೇಡಿಕೆ ಇಟ್ಟು ಸ್ವೀಕರಿಸಿಕೊಂಡಾಗ ಎಸಿಬಿ ಅಧಿಕಾರಿಗಳು ಟ್ರ್ಯಾಪ್ ಮಾಡಿ ಆರೋಪಿತನನ್ನು ಬಂಧಿಸಿದ್ದರು.
ಬೆಳಗಾವಿ ಮುಜರಾಯಿ ತಹಶೀಲ್ದಾರ್ ದಶರಥ ಎಸಿಬಿ ಬಲೆಗೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ