
ಪ್ರಗತಿವಾಹಿನಿ ಸುದ್ದಿ, ಗೋಕಾಕ: ಮೂತ್ರ ವಿಸರ್ಜನೆ ಮುಗಿಸಿ ರಸ್ತೆ ದಾಟುತ್ತಿದ್ದ ವ್ಯಕ್ತಿಯೊಬ್ಬರಿಗೆ ಕ್ರೂಜರ್ ವಾಹನ ಬಡಿದು ಮೃತಪಟ್ಟಿದ್ದಾರೆ.
ಅಥಣಿ ತಾಲೂಕಿನ ಅನಂತಪುರ ನಿವಾಸಿ ರಮೇಶ ಬಾಳಾಸಾಬ ಪಾಟೀಲ (65) ಮೃತಪಟ್ಟವರು. ಅವರು ಲೋಳಸೂರ ಗ್ರಾಮ ವ್ಯಾಪ್ತಿಯಲ್ಲಿ ಮೂತ್ರ ವಿಸರ್ಜನೆ ಮುಗಿಸಿ ರಸ್ತೆ ದಾಟಿ ತಾವು ನಿಲ್ಲಿಸಿದ್ದ ವಾಹನದತ್ತ ಬರುತ್ತಿದ್ದಾಗ ಸಂಗನಕೇರಿಯಿಂದ ಗೋಕಾಕ ಕಡೆಗೆ ಸಾಗುತ್ತಿದ್ದ ಕ್ರೂಜರ್ ವಾಹನ ಬಡಿದು ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ.
ಈ ಸಂಬಂಧ ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಕ್ರೂಜರ್ ವಾಹನದ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.
ಮಳೆಯಲ್ಲೇ ಡಾಂಬರೀಕರಣ;ಲೋಕೋಪಯೋಗಿ ಇಲಾಖೆ ಮೂವರು ಎಂಜಿನಿಯರ್ ಗಳು ಸಸ್ಪೆಂಡ್