Latest

ಬಸ್ ನಲ್ಲಿ ಆಕಸ್ಮಿಕ ಬೆಂಕಿ; ನಿರ್ವಾಹಕ ಸಜೀವ ದಹನ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಒಂದಕ್ಕೆ ನಿಲ್ಲಿಸಿಟ್ಟಲ್ಲೇ ಬೆಂಕಿ ಹೊತ್ತಿಕೊಂಡು ಅದರಲ್ಲಿ ಮಲಗಿದ್ದ ನಿರ್ವಾಹಕ ಸಜೀವ ದಹನವಾಗಿದ್ದಾರೆ.

ಬ್ಯಾಡರಹಳ್ಳಿ ವ್ಯಾಪ್ತಿಯ ಲಿಂಗಧೀರನಹಳ್ಳಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಬಸ್ ನಿರ್ವಾಹಕ ಮುತ್ತಯ್ಯಸ್ವಾಮಿ (45) ಮೃತರು. ಲಿಂಗಧೀರನಹಳ್ಳಿಯ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ನಿಲ್ಲಿಸಿಟ್ಟಿದ್ದ ಸುಮನಹಳ್ಳಿ ಡಿಪೊಕ್ಕೆ ಸೇರಿದ ಬಸ್ ನಲ್ಲಿ ಬೆಳಗಿನಜಾವ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ರಾತ್ರಿ ಚಾಲಕ, ನಿರ್ವಾಹಕ ಇಬ್ಬರೂ ಈ ಬಸ್ ನಲ್ಲಿ ಮಲಗಿದ್ದರು. ಆದರೆ ಚಾಲಕ ಬೆಳಗ್ಗೆ ಶೌಚಕ್ಕೆಂದು ಹೋಗಿದ್ದರಿಂದ ಪಾರಾಗಿದ್ದಾರೆ.

ಬೆಂಕಿ ಹೊತ್ತಿಕೊಂಡಿದ್ದನ್ನು ಗಮನಿಸುತ್ತಲೇ ಜನರು ಅಗ್ನಿಶಾಮಕ ದಳದವರಿಗೆ ಫೋನ್ ಕರೆ ಮಾಡಿದ್ದಾರೆ. ಕೂಡಲೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದವರು ಬೆಂಕಿ ನಂದಿಸಿದರು. ಆದರೆ ಅದಕ್ಕೂ ಮುನ್ನವೇ ಮುತ್ತಯ್ಯಸ್ವಾಮಿ ಕೊನೆಯುಸಿರೆಳೆದರು. ಅವರ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿದ್ದು ಬ್ಯಾಡರಹಳ್ಳಿ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

https://pragati.taskdun.com/scientists-have-discovered-making-electricity-from-thin-air/
https://pragati.taskdun.com/wildfire-case-in-karnataka-the-forest-department-released-shocking-statistics/
https://pragati.taskdun.com/the-administration-of-the-state-is-based-on-sharana-tatva/

Home add -Advt

Related Articles

Back to top button