Cancer Hospital 2
Beereshwara 36
LaxmiTai 5

*ಭೀಕರ ಅಪಘಾತ: ಅಥಣಿ ಮೂಲದ ಒಂದೇ ಕುಟುಂಬದ ನಾಲ್ವರು ಸೇರಿ ಐವರು ದುರ್ಮರಣ*

Anvekar 3

ಪ್ರಗತಿವಾಹಿನಿ ಸುದ್ದಿ; ಹೈದರಾಬಾದ್: ತಿರುಪತಿಗೆ ಪ್ರವಾಸಕ್ಕೆ ತೆರಳಿದ್ದ ಬೆಳಗಾವಿ ಮೂಲದ ಐವರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಲಭ್ಯವಾಗಿದ್ದು, ಮೃತರೆಲ್ಲರು ಅಥಣಿ ಮೂಲದವರಾಗಿದ್ದು, ಅವರಲ್ಲಿ ನಾಲ್ವರು ಒಂದೇ ಕುಟುಂಬ ಸದಸ್ಯರು ಎಂದು ತಿಳಿದುಬಂದಿದೆ.

ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ಚಿತ್ತೂರಿಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಕ್ರೂಸರ್ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ಐವರು ಸಾವನ್ನಪ್ಪಿದ್ದಾರೆ. ಗಾಯಾಳುಗಳಲ್ಲಿ 7 ಜನರ ಸ್ಥಿತಿ ಗಂಭೀರವಾಗಿದೆ.

Emergency Service

ಆಂಧ್ರಪ್ರದೇಶದ ಕೆವಿಪಲ್ಲಿ ತಾಲೂಕಿನ ಮಠಂಪಲ್ಲಿ ಗ್ರಾಮದಲ್ಲಿ ಈ ಅಪಘಾತ ಸಂಭವಿಸಿದೆ. ಮೃತರನ್ನು ಹನುಮಂತ ಆಜೂರ (52), ಮಾನಂದಾ ಆಜೂರ (46), ಶೋಭಾ ಆಜೂರ (36) ಅಬೀಕಾ ಆಜೂರ (19) ಮಣಮಂತ ಜಾಧವ್ (52) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಅಥಣಿ ತಾಲೂಕಿನ ಬಡಚಿ ಗ್ರಮದವರಾಗಿದ್ದಾರೆ.

ಗಾಯಾಳುಗಳನ್ನು ರೂವಾ ಆಸ್ಪತ್ರೆಗೆ ದಾಖಲಿಸಲಾಗಿದೆ.

Bottom Add3
Bottom Ad 2