Belagavi NewsBelgaum NewsKarnataka News
*ಅಳ್ನಾವರ-ಗೋವಾ ಹೆದ್ದಾರಿಯಲ್ಲಿ ಭೀಕರ ಅಪಘಾತ: ಬೆಳಗಾವಿಯ ಮೂವರು ಸ್ಥಳದಲ್ಲೇ ದುರ್ಮರಣ*
ಪ್ರಗತಿವಾಹಿನಿ ಸುದ್ದಿ: ಐಶರ್ ವಾಹನ ಹಾಗೂ ಟಿಟಿ ವಾಹನಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಶಿರಸಂಗಿ ಗ್ರಾಮದ ಮೂವರು ರೈತರು ಸಾವನ್ನಪ್ಪಿರುವ ಘಟನೆ ಧಾರವಡ ಜಿಲ್ಲೆಯ ಅಳ್ನಾವರ-ಗೋವಾ ಹೆದ್ದಾರಿಯಲ್ಲಿ ನಡೆದಿದೆ.
ಹನುಮಂತಪ್ಪ ಮಲ್ಲಾಡ, ಮಹಾಂತೇಶ್ ಚವ್ಹಾಣ್, ಮಹದೇವ ಹಾಲೊಳ್ಳಿ ಮೃತರು. ಸವದತ್ತಿಯ ಶಿರಸಂಗಿ ಮೂಲದವರು. ಶಿರಸಂಗಿ ಗ್ರಾಮದಿಂದ ಮೇವಿನ ಹೊಟ್ಟು ತುಂಬಿಕೊಂಡು ಐಶರ್ ವಾಹನದಲ್ಲಿ ಗೋವಾ ಕಡೆಗೆ ತೆರಳುತ್ತಿದ್ದರು. ಈ ವೇಳೆ ಎದುರಿನಿಂದ ಬರುತ್ತಿದ್ದ ಟಿಟಿ ವಾಹನಕ್ಕೆ ಐಶರ್ ಡಿಕ್ಕಿ ಹೊಡೆದಿದೆ.
ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಳ್ನಾವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ