Latest

ಬೆಳಗಾವಿಗೆ ಕೆಲವೇ ಕ್ಷಣಗಳಲ್ಲಿ ಅಮಿತ್ ಶಾ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ ಶಾ ಕೆಲವೇ ಕ್ಷಣಗಳಲ್ಲಿ ಬೆಳಗಾವಿಗೆ ಆಗಮಿಸಲಿದ್ದಾರೆ. 10.30ಕ್ಕೆ ಅವರ ವಿಮಾನ ಲ್ಯಾಂಡ್ ಆಗುವ ನಿರೀಕ್ಷೆ ಇದೆ.

Home add -Advt

ಕೊಚ್ಚಿಯಿಂದ ವಿಶೇಷ ವಿಮಾನದ ಮೂಲಕ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಬರಲಿರುವ ಅವರು, ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಸಾಂಗ್ಲಿಗೆ ಪ್ರಯಾಣ ಬೆಳೆಸುವರು.

ಬೆಳಗಾವಿ ವಿಮಾನ ನಿಲ್ದಾಣದಲ್ಲಿ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ, ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಸಂಸದ ಸುರೇಶ ಅಂಗಡಿ, ಶಾಸಕರಾದ ಅಭಯ ಪಾಟೀಲ, ಅನೀಲ ಬೆನಕೆ, ಮಾಜಿ ಶಾಸಕ ಸಂಜಯ ಪಾಟೀಲ ಮೊದಲಾದವರು ಅಮಿತ ಶಾ ಅವರನ್ನು ಸ್ವಾಗತಿಸಲಿದ್ದಾರೆ. 

ಅಮಿತ ಶಾ ಸ್ವಾಗತಿಸಲು ಮಹಾರಾಷ್ಟ್ರ ಸಚಿವ ರಂಜಿತ ಪಾಟೀಲ ಆಗಮಿಸಿದ್ದಾರೆ. ಅಮಿತ ಶಾ ಅವರು ಸಾಂಗ್ಲಿಯ ತಾಸಗಾಂವ್ ಕ್ಷೇತ್ರದಲ್ಲಿ ಸಂಜಯಕಾಕಾ ಪಾಟೀಲ ಪರ ಚುನಾವಣೆ ಪ್ರಚಾರ ನಡೆಸಿ, ಸಂಜೆ 4 ಗಂಟೆಗೆ ಪುನಃ ಬೆಳಗಾವಿಗೆ ಬಂದು ಇಲ್ಲಿಂದ ವಿಮಾನದ ಮೂಲಕ ನವದೆಹಲಿಗೆ ತೆರಳುವರು. 

 

Related Articles

Back to top button