Kannada NewsKarnataka NewsLatest

ರಾಯಬಾಗ: ಎರಡು ದಶಕಗಳ ಕಾಲ ತಲೆಮರೆಸಿಕೊಂಡಿದ್ದ ಆರೋಪಿ ಪೊಲೀಸ್ ಬಲೆಗೆ

ಪ್ರಗತಿವಾಹಿನಿ ಸುದ್ದಿ, ರಾಯಬಾಗ: ಹಲ್ಲೆ ಪ್ರಕರಣವೊಂದರಲ್ಲಿ ಭಾಗಿಯಾಗಿ  ಎರಡು ದಶಕಗಳಷ್ಟು ಕಾಲದಿಂದ ಪತ್ನಿ ತವರಿನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು ರಾಯಬಾಗ ಪೊಲೀಸರು ಬಂಧಿಸಿದ್ದಾರೆ.

ಅಲ್ಲಾವುದ್ದೀನ್ ಅಬ್ದುಲ್ ಮಾಂಜರೆ (50) ಬಂಧಿತ ಆರೋಪಿ. ಈತನ ವಿರುದ್ಧ 2003ರಲ್ಲಿ  ಕ್ರಿಮಿನಲ್ ಪ್ರಕರಣವೊಂದು ದಾಖಲಾಗಿತ್ತು. ಆದರೆ ಈತ ನಾಪತ್ತೆಯಾಗಿದ್ದ. ಪೊಲೀಸರು ಈತನ ತೀವ್ರ ತಲಾಶೆಯಲ್ಲಿ ತೊಡಗಿದ್ದರು.

Home add -Advt

ಖಚಿತ ಸುಳಿವುಗಳನ್ನಾಧರಿಸಿ ಈತನ ಪತ್ನಿಯ ತವರೂರಾದ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಕುರಂದವಾಡ ಗ್ರಾಮಕ್ಕೆ ತೆರಳಿ ಪೊಲೀಸ್ ಸಿಬ್ಬಂದಿ ಎಸ್.ಎಸ್. ಚೌದ್ರಿ ಹಾಗೂ ಆರ್.ಬಿ. ಖಾನಾಪುರೆ ಅವರು ಬಂಧಿಸಿ ಕರೆತಂದಿದ್ದು ಪ್ರಕರಣದ ತನಿಖೆ ಮತ್ತೆ ಆರಂಭವಾಗಿದೆ.

ಸಿಬ್ಬಂದಿ ಕಾರ್ಯಾಚರಣೆಗೆ ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ.

ಇಬ್ಬರು ಪಾಲಿಕೆ ಎಂಜಿನಿಯರ್ ಗಳು ಸಸ್ಪೆಂಡ್

 

Related Articles

Back to top button