Karnataka News

*ಭಟ್ಕಳ ಪೊಲೀಸ್ ಠಾಣೆಗೆ ಬಾಂಬ್ ಬೆದರಿಕೆ ಹಾಕಿದ್ದ  ಆರೋಪಿ  ಬಂಧನ*

ಪ್ರಗತಿ ವಾಹಿನಿ ಸುದ್ದಿ, ಭಟ್ಕಳ: ಭಟ್ಕಳ ಪೊಲೀಸ್ ಠಾಣೆಗೆ  ಬಾಂಬ್ ಹಾಕುವುದಾಗಿ ಪತ್ರ ಬರೆದು  ಬೆದರಿಕೆ ಹಾಕಿದ್ದ ಆರೋಪಿ ಹನುಮಂತಪ್ಪ ಎಂಬಾತನನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಹನುಮಂತಪ್ಪ ಠಾಣೆಯಲ್ಲಿ ಬಾಂಬ್ ಸ್ಫೋಟ ನಡೆಸುವುದಾಗಿ ಪತ್ರದ ಮೂಲಕ ಬೆದರಿಕೆ ಹಾಕಿದ್ದ.
ತನ್ನ ಹೆಸರು ಹಾಗೂ ವಿಳಾಸವನ್ನು ಬರೆಯದೆ ಪೋಸ್ಟ್ ಕಾರ್ಡ್ ನ ಮುಖಪುಟದಲ್ಲಿ ಅರ್ಧ ಚಂದ್ರಾಕೃತಿ ಮತ್ತು ನಕ್ಷತ್ರ ಚಿಹ್ನೆ, ಅದರ ಕೆಳಗೆ 786 ಮತ್ತು ಉರ್ದು ಅಕ್ಷರಗಳನ್ನು ಬರೆದು  ಅದರ ಕೆಳಗೆ ಭಟ್ಕಳ ಉತ್ತರಕನ್ನಡ ಎಂದು ನಮೂದಿಸಿ ಆರೋಪಿ ಪತ್ರವೊಂದನ್ನು ಕಳುಹಿಸಿದ್ದ ಎನ್ನಲಾಗಿದೆ.
ಬಾಂಬ್ ಸ್ಫೋಟಿಸುವ ಬಗ್ಗೆ ಭಟ್ಕಳ ಠಾಣೆಗೆ ಬಂದ ಅನಾಮಧೇಯ ಪತ್ರವನ್ನು ಪರಿಶೀಲಿಸಿದ ಭಟ್ಕಳದ ಪೊಲೀಸ್ ವೃತ್ತಾಧಿಕಾರಿ ದಿವಾಕರ್ ಪಿ.ಎಂ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದರು.

Related Articles

Back to top button