*ಕೊಲೆ ಕೇಸ್ನಲ್ಲಿ ಎಸ್ಕೇಪ್ ಆಗಿದ್ದ ಆರೋಪಿ ಗಾಂಜಾ ಕೇಸ್ನಲ್ಲಿ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದ ಸಿಸಿಬಿ ವಿಭಾಗದ ಪೊಲೀಸರು ಕೊಲೆ ಮಾಡಿ ಪರಾರಿಯಾದ ಹಾಗೂ ಗಾಂಜಾ ಮಾರಾಟದಲ್ಲಿ ನಿರತನಾದ ಆರೋಪಿಯನ್ನು ಬಂಧಿಸಲಾಗಿದೆ.
ಆಕಾಶ ದಿಲೀಪ ದೊಡಮನಿ ಎಂಬಾತ ಕಾರ್ತಿಕ ಎಂಬಾತನಿಂದ ಗಾಂಜಾ ತಂದು, ಜಾಂಬೋಟಿ ರಸ್ತೆಯ ಮುಖಾಂತರ ಮಾರಾಟ ಮಾಡಲು ಹೋಗುತ್ತಿದ್ದಾಗ ಬೆಳಗಾವಿ ನಗರ ಸಿಸಿಬಿ ವಿಭಾಗದ ಪಿಐ ಮಂಜುನಾಥ ನಾಯಿಕ ನೇತೃತ್ವದಲ್ಲಿ ಪಿಎಸ್ಐ ಮಂಜುನಾಥ ಭಜಂತ್ರಿ ಸಿಬ್ಬಂದಿ ದಾಳಿ ಮಾಡಿ ರೂ.80000 ಮೌಲ್ಯದ 1 ಕೆಜಿ 704 ಗ್ರಾಂ ಗಾಂಜಾ, ರೂ.11,000 ಮೌಲ್ಯದ ಎರಡು ಮೊಬೈಲ್ಗಳನ್ನು ವಶಕ್ಕೆ ಪಡೆದಿದ್ದಾರೆ.
ಬೆಳಗಾವಿ ಗ್ರಾಮೀಣ ಠಾಣೆ ಪ್ರ. ಸಂ. 184/2026 ಕಲಂ.20(b)(ii)(B), 8(c) ಎನ್ಡಿಪಿಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಲಾಗಿದೆ.
ಆರೋಪಿ ನಂ.1 ಆಕಾಶ ದಿಲೀಪ ದೊಡಮನಿ ಇವನು ಕೆಲವು ದಿನಗಳ ಹಿಂದೆ ಬೆಳಗಾವಿ ಗ್ರಾಮಿಣ ಠಾಣೆ ಪ್ರ. ಸಂ. 137/2026 (ಕೊಲೆ & ಎಸ್ಸಿ/ಎಸ್ಟಿ) ಪ್ರಕರಣದಲ್ಲಿಯೂ ಸಹ ಆರೋಪಿಯಿದ್ದು, ಕೃತ್ಯವೆಸಗಿ ಪರಾರಿಯಾಗಿದ್ದನು. ಈ ದಾಳಿಯಿಂದ ಪರಾರಿಯಾಗಿದ್ದ ಕೊಲೆ ಆರೋಪಿಯನ್ನು ಬಂಧಿಸಿದಂತಾಗಿದೆ.
ದಾಳಿ ಕೈಗೊಂಡ ಸಿಸಿಬಿ ವಿಭಾಗದ ಪಿಐ, ಪಿಎಸ್ಐ, ಮತ್ತು ಸಿಬ್ಬಂದಿಯ ಕಾರ್ಯವನ್ನು ಪೊಲೀಸ್ ಆಯುಕ್ತರು ಹಾಗೂ ಡಿಸಿಪಿಗಳು ಶ್ಲಾಘಿಸಿದ್ದಾರೆ.




