
ಪ್ರಗತಿವಾಹಿನಿ ಸುದ್ದಿ: ಲೇಡಿ ಫಿಟ್ನೆಸ್ ಇನ್ ಫ್ಲುಯೆನ್ಸರ್ ಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಯುವತಿಗೆ ನಿರಂತರ ಮೆಸೇಜ್ ಮಾಡಿ ಕಿರುಕುಳ ನೀಡುತ್ತಿದ್ದ ಹರಿಯಾಣ ಮೂಲದ ಸುಧೀರ್ ಕುಮಾರ್ ಎಂಬಾತನನ್ನು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಯುವತಿ ಬೆಂಗಳೂರಿನಲ್ಲಿ ಲೇಡಿ ಫಿಟ್ನೆಸ್ ಇನ್ ಫ್ಲುಯೆನ್ಸರ್ ಆಗಿದ್ದಳು.
ಯುವತಿಯನ್ನು ಇನ್ ಸ್ಟಾಗ್ರಾಂ ನಲ್ಲಿ ಫಾಲೋ ಮಾಡುತ್ತಿದ್ದ. ಅಶ್ಲೀಲ ಕಮೆಂಟ್, ಮೆಸೇಜ್ ಕಳುಹಿಸುತ್ತಿದ್ದ. ಹರಿಯಾಣದಿಂದ ಬೆಂಗಳೂರಿಗೆ ಬಂದಿದ್ದ ಈತ ಜಿಮ್ ಸಹೋದ್ಯೋಗಿಗಳ ಬಳಿ, ಸ್ನೇಹಿತರ ಬಳಿ ಯುವತಿ ಬಗ್ಗೆ ವಿಚಾರಿಸಿದ್ದ. ಅಲ್ಲದೇ ಯುವತಿಗೆ ನಿರಂತರ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ.
ಪೊಲೀಸರು ಹರಿಯಾಣ ಮೂಲದ ಆರೋಪಿಯನ್ನು ಬಂಧಿಸಿದ್ದಾರೆ.


