Belagavi NewsBelgaum NewsKannada NewsKarnataka NewsLatest
*ಆಚಾರ್ಯ ರತ್ನ ಶ್ರೀ 108 ಬಾಹುಬಲಿ ಮುನಿಮಹಾರಾಜರ 94ನೇ ಜನ್ಮ ಜಯಂತಿ ಮಹೋತ್ಸವ ದಲ್ಲಿ ಪಾಲ್ಗೊಂಡ ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿಯ ಹಲಗಾದ ಶ್ರೀ ಬಾಲಾಚಾರ್ಯ ಸಿದ್ಧಸೇನ ಮುನಿ ಮಹಾರಾಜ ಆಧ್ಯಾತ್ಮಿಕ ಅನುಸಂಧಾನ ಫೌಂಡೇಶನ್ ವತಿಯಿಂದ ನಡೆದ ಆಚಾರ್ಯ ರತ್ನ ಶ್ರೀ 108 ಬಾಹುಬಲಿ ಮುನಿಮಹಾರಾಜರ 94ನೇ ಜನ್ಮ ಜಯಂತಿ ಮಹೋತ್ಸವ ಹಾಗೂ ಸರ್ವದೋಷ ಪ್ರಾಯಶ್ಚಿತ್ತ ವಿಧಾನ ಸಮಾರಂಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಭಾಗವಹಿಸಿದ್ದರು.

ಈ ವೇಳೆ ಪರಮಪೂಜ್ಯ ವೀರೇಂದ್ರ ಹೆಗ್ಗಡೆಯವರು, ಪರಮಪೂಜ್ಯ ಬಾಲಾಚಾರ್ಯ ಡಾ.ಶ್ರೀ 108 ಸಿದ್ದಸೇನ ಮಹಾರಾಜರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಡಿ.ಸುಧಾಕರ್, ಶಾಸಕರು ಹಾಗೂ ಮಾಜಿ ಸಚಿವರಾದ ಲಕ್ಷ್ಮಣ್ ಸವದಿ, ಶಾಸಕ ಕೋನರೆಡ್ಡಿ, ಶ್ರೀ ಸುರೇಂದ್ರ ಹೆಗ್ಗಡೆ, ವಿಧಾನ ಪರಿಷತ್ ಸದಸ್ಯರಾದ ನಸೀರ್ ಅಹಮದ್, ಸುನೀಲ್ ಹನುಮಣ್ಣವರ್, ಡಾ.ಮಗದುಮ್, ಯುವ ಮುಖಂಡರಾದ ಮೃಣಾಲ್ ಹೆಬ್ಬಾಳಕರ್ ಹಾಗೂ ಜೈನ ಸಮಾಜದ ಹಲವು ಮುಖಂಡರು ಉಪಸ್ಥಿತರಿದ್ದರು.



