ಪ್ರಗತಿವಾಹಿನಿ ಸುದ್ದಿ, ಭುಬನೇಶ್ವರ: ಬಾಲಾಸೋರ್ ಬಳಿ ಸಂಭವಿಸಿದ ಭೀಕರ ರೈಲು ಅಪಘಾತಕ್ಕೆ ಮಸೀದಿ ಕಾರಣ ಎಂಬಂತೆ ಬಿಂಬಿಸಿ ಜಾಲತಾಣದಲ್ಲಿ ಫೋಟೊ ಶೇರ್ ಮಾಡಿದ ಕರ್ನಾಟಕದ ಮಹಿಳೆ ವಿರುದ್ಧ ಒಡಿಶಾ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ.
ಕರ್ನಾಟಕ ಪೊಲೀಸರ ನೆರವಿನಿಂದ ತುಮಕೂರು ಮೂಲದ ಮಹಿಳೆಯ ಬಗ್ಗೆ ಮಾಹಿತಿ ಸಂಗ್ರಹಿಸಿರುವ ಒಡಿಶಾ ಪೊಲೀಸರು, ಘಟನಾ ಸ್ಥಳದಲ್ಲಿ ಮಸೀದಿ ಇರುವುದನ್ನು ನಿರಾಕರಿಸಿದ್ದಾರೆ.
ಈ ಬಗ್ಗೆ ಜಾಲತಾಣಗಳಲ್ಲಿ ಸಂದೇಶ ಹಂಚಿಕೊಂಡಿರುವ ಒಡಿಶಾ ಪೊಲೀಸರು, “ಕೆಲವರು ರೈಲು ದುರಂತದ ಘಟನೆಗೆ ಕೋಮು ಬಣ್ಣ ಬಳಿದು ಜಾಲತಾಣದಲ್ಲಿ ತಪ್ಪು ಮಾಹಿತಿಗಳನ್ನು ಹಂಚಿಕೊಳ್ಳುವ ಮೂಲಕ ಕಿಡಿಗೇಡಿತನ ಪ್ರದರ್ಶಿಸುತ್ತಿರುವುದು ದುರದೃಷ್ಟಕರ” ಎಂದು ಹೇಳಿರುವುದಲ್ಲದೆ, ಒಡಿಶಾ ಪೊಲೀಸ್ ಜಿಆರ್ ಪಿಯಿಂದ ತನಿಖೆ ನಡೆಯುತ್ತಿರುವುದಾಗಿ ತಿಳಿಸಿದ್ದಾರೆ.
https://pragati.taskdun.com/elon-musk-returned-to-childhood/
https://pragati.taskdun.com/a-medical-student-committed-suicide-after-calling-a-friends/
https://pragati.taskdun.com/gold-price-fixed-silver-price-rose-slightly/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ