Kannada NewsKarnataka NewsLatest

ಬಸವತತ್ವಕ್ಕೆ ಬದ್ಧವಾಗಿ ಸರ್ವ ಜನಾಂಗಗಳ ಏಳಿಗೆಗೆ ಕ್ರಮ: ಲಕ್ಷ್ಮೀ ಹೆಬ್ಬಾಳಕರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬಸವತತ್ವಕ್ಕೆಬದ್ಧವಾಗಿದ್ದು ಸರ್ವ ಜನಾಂಗಗಳ ಏಳಿಗೆಗೆ ಶ್ರಮಿಸುತ್ತಿರುವುದಾಗಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.

ಅವರು ಬೆಳಗಾವಿ ಗ್ರಾಮೀಣ ಕ್ಷೇತ್ರದ ಸಾಂಬ್ರಾ ಗ್ರಾಮದಲ್ಲಿ ಅರಿಷಿಣ ಕುಂಕುಮ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಶಾಸಕಿಯಾದಾಗಿನಿಂದ ಕ್ಷೇತ್ರದ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಾವಿರಾರು ಕೋಟಿ ರೂ.ಗಳ ಅನುದಾನವನ್ನು ತಂದು ಪ್ರತಿ ಗ್ರಾಮಕ್ಕೆ ಅಭಿವೃದ್ಧಿಯ ಸ್ಪರ್ಶವನ್ನು ನೀಡಿದ್ದಾಗಿ ಹೇಳಿದ ಅವರು, ದೆಹಲಿ ಮಟ್ಟದಲ್ಲೂ ಇಲ್ಲಿನ ಅಭಿವೃದ್ಧಿ ಶ್ಲಾಘಿಸುವಂತೆ ಮಾಡಲಾಗಿದೆ. ವಯೋಮಾನದ ಭೇದವಿಲ್ಲದೆ ಪ್ರತಿಯೊಬ್ಬರ ಅಭ್ಯುದಯಕ್ಕೆ ಶ್ರಮಿಸಲಾಗಿದೆ ಎಂದರು.

ಸ್ಥಳೀಯ ಮಹಿಳೆಯರಿಂದ ಅರಿಷಿಣ ಕುಂಕುಮ ಸ್ವೀಕರಿಸಿ, ಭಾರತೀಯರ ಭವ್ಯ ಪರಂಪರೆಯನ್ನು ಪ್ರತಿಬಿಂಬಿಸುವ ಹಾಗೂ ಬಾಂಧವ್ಯ  ಬೆಸೆಯುವ ಅರಿಷಿಣ ಕುಂಕುಮ ಕಾರ್ಯಕ್ರಮದಲ್ಲಿ ಭಾಗವಹಿಸುವುದು ತಮ್ಮ ಸೌಭಾಗ್ಯ ಎಂದರು.

ವಿಧಾನ ಪರಿಷತ್ ಸದಸ್ಯ  ಚನ್ನರಾಜ ಹಟ್ಟಿಹೊಳಿ ಮಾತನಾಡಿದರು. ಈ ಸಮಯದಲ್ಲಿ ಗ್ರಾಮದ ಹಿರಿಯರು,   ನಾಗೇಶ ದೇಸಾಯಿ, ಈರಪ್ಪ ಸುಳೇಭಾವಿ, ಸದಾಶಿವ ಪಾಟೀಲ, ಶ್ವೇತಾ ಬೊಮ್ಮನವಾಡಿ, ಧನಶ್ರೀ ಚೌಗುಲೆ, ಪದ್ಮಶ್ರೀ ಪೂಜೇರಿ, ಆಶಾ ಮೋರೆ, ಶಾಂತಾ ದೇಸಾಯಿ, ಸುಲೋಚನಾ ಜೋಗಾಣಿ, ಶಕೀಲಾ ಬಾಗೇವಾಡಿ, ಮಹೇಂದ್ರ,  ಭಾವುಕಣ್ಣ ಬಸರೀಕಟ್ಟಿ, ಮಹೇಶ ಕುಲಕರ್ಣಿ, ರಫಿಕ್ ಅತ್ತಾರ, ವಾಸುದೇವ ಪಾಟೀಲ, ಏಕನಾಥ್ ಸನದಿ, ಲಕ್ಷ್ಮಣ ಸುಳೇಬಾವಿ ಹಾಗೂ ಗ್ರಾಮದ ಸಾವಿರಾರು ಮಹಿಳೆಯರು ಉಪಸ್ಥಿತರಿದ್ದರು.

ಸಾವಿರಾರು ಬಲಿಪಶುಗಳಿಗೆ ಲಕ್ಷಗಟ್ಟಲೆ ಪಂಗನಾಮ ಹಾಕಿದ “ಹಾಯ್ ಮೊಮ್.. ಹಾಯ್ ಡ್ಯಾಡ್..” !

https://pragati.taskdun.com/karnataka-maharashtra-border-issuecm-basavaraj-bommaiamith-shahmeet/

ಗಡಿ ವಿವಾದ ಚರ್ಚೆ: ಕೇಂದ್ರ ಗೃಹ ಸಚಿವರ ಭೇಟಿಗೆ ತೆರಳಲು ಸಜ್ಜಾದ ಸಿಎಂ ಬೊಮ್ಮಾಯಿ

https://pragati.taskdun.com/border-dispute-discussion-cm-bommai-set-to-meet-union-home-minister/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button