Film & EntertainmentKannada NewsKarnataka News
*ನಟಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ: ನಟ, ನಿರ್ದೇಶಕ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ನಟಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಬೆಂಗಳೂರಿನ ರಾಜಾಜಿನಗರ ಠಾಣೆ ಪೊಲೀಸರು ನಟ ಹೇಮಂತ್ ಅವರನ್ನು ಬಂಧಿಸಿದ್ದಾರೆ.
ಸಿನಿಮಾ ಮಾಡುವುದಾಗಿ ಹೇಳಿ ನಟಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ನಟ, ನಿರ್ದೇಶಕ ಮತ್ತು ನಿರ್ಮಾಪಕ ಹೇಮಂತ್ ಅವರನ್ನು ಬಂಧಿಸಲಾಗಿದೆ.
2022 ರಲ್ಲಿ ನಟಿಗೆ ನಟ ಹೇಮಂತ್ ಪರಿಚಯವಾಗಿದ್ದರು. ಚಿತ್ರದಲ್ಲಿ ನಟಿಗೆ ಅವಕಾಶ ನೀಡಿ ಕಿರುಕುಳ ನೀಡಿದ್ದಾರೆ. ಎರಡು ಲಕ್ಷ ರೂಪಾಯಿ ಸಂಭಾವನೆ ನೀಡುವುದಾಗಿ ಅಗ್ರಿಮೆಂಟ್ ಮಾಡಿಕೊಂಡಿದ್ದರು.
ಮುಂಗಡವಾಗಿ 60 ಸಾವಿರ ರೂಪಾಯಿಯನ್ನು ಹೇಮಂತ್ ನೀಡಿದ್ದರು. ಚಿತ್ರೀಕರಣ ತಡವಾಗಿದ್ದಕ್ಕೆ ನಟಿ ಬೇಸರಗೊಂಡಿದ್ದರು. ಅಶ್ಲೀಲ ಬಟ್ಟೆ ತೊಡಲು ಒತ್ತಾಯಿಸಿದ್ದರು ಎನ್ನಲಾಗಿದೆ.