Latest

ಸರ್ಕಾರ ಕೂಡ ಸಂಕಷ್ಟದಲ್ಲಿದೆ ಎಂದ ಹ್ಯಾಟ್ರಿಕ್ ಹೀರೋ

ಪ್ರಗತಿವಾಹಿನಿ ಸುದ್ದಿ; ಮೈಸೂರು: ಅನ್ ಲಾಕ್ 5.0 ಮಾರ್ಗಸೂಚಿ ಪ್ರಕಾರ ಚಿತ್ರಮಂದಿರ ತೆರೆಯಲು ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಥಿಯೇಟರ್ ಗಳನ್ನು ತೆರೆಯುತ್ತಿರುವುದು ಸಂತಸದ ವಿಚಾರ. ನಾನು ಓರ್ವ ನಟನಾಗಿ ಜನರಿಗೆ ಸಿನಿಮಾ ನೋಡಲು ಬನ್ನಿ ಎಂದು ಕರೆಯುತ್ತೇನೆ ಆದರೆ ಕೊರೊನಾ ಭೀತಿಯಿಂದಾಗಿ ರಿಸ್ಕ್ ತೆಗೆದುಕೊಂಡು ಸಿನಿಮಾ ನೋಡಿ ಎಂದು ಹೇಳಲ್ಲ ಎಂದಿದ್ದಾರೆ.

ಮೈಸೂರು ಮೃಗಾಲಯಕ್ಕೆ ಭೇಟಿ ನೀಡಿದ ಶಿವರಾಜ್ ಕುಮಾರ್, ಸುದ್ದಿಗಾರರೊಂದಿಗೆ ಮಾತನಾಡಿ, ನಟನಾಗಿ ನಾನು ಚಿತ್ರೀಕರಣ ಮಾಡಬಹುದು ಆ್ಯಕ್ಟಿಂಗ್ ಮಾಡಬಹುದು. ಚಿತ್ರ ಪ್ರದರ್ಶನ ಹಾಗೂ ಬಿಡುಗಡೆ ಬಗ್ಗೆ ನಾನೇನೂ ಹೇಳಲು ಸಾಧ್ಯವಿಲ್ಲ. ಈ ಬಗ್ಗೆ ನಿರ್ಮಾಪಕರು ತೀರ್ಮಾನಿಸುತ್ತಾರೆ. ಜನರು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ ಎಂದು ಕರೆಯುತ್ತೇನೆ. ಆದರೆ ಎಲ್ಲರೂ ಮುಂಜಾಗೃತಾ ಕ್ರಮ ಕೈಗೊಂಡು, ಸುರಕ್ಷತೆ ನೋಡಿಕೊಂಡು ಬರಲಿ ಎಂದು ಹೇಳಿದರು.

ಎಲ್ಲಾ ಉದ್ಯಮಗಳಂತೆ ಚಿತ್ರರಂಗ ಕೂಡ ಒಂದು ಉದ್ಯಮ. ಕೊರೊನಾ ಲಾಕ್ ಡೌನ್ ನಿಂದಾಗಿ ಚಿತ್ರರಂಗ ಸಂಕಷ್ಟದಲ್ಲಿರುವುದರಿಂದ ಸಹಾಯ ಮಾಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ. ಸರ್ಕಾರ ಕೂಡ ಈ ಸಂದರ್ಭದಲ್ಲಿ ಸಂಕಷ್ಟದಲ್ಲಿದೆ. ಎಲ್ಲವನ್ನೂ ನಿಭಾಯಿಸಬೇಕಾದ ಜವಾಬ್ದಾರಿ. ಹೀಗಾಗಿ ಸರ್ಕಾರದ ಮೇಲೆ ಒತ್ತಡ ಹೇರುವುದು ಸರಿಯಲ್ಲ. ಅವರಿಗೂ ಸಮಯ ಬೇಕು ಎಂದು ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button