ಮುಂಬೈ – ಇತ್ತೀಚೆಗೆ ಬಿಡುಗಡೆಯಾಗಿರುವ ಹಿಂದಿ ಚಿತ್ರ ಗೆರಾಯಿಯಾ ನಾನಾ ಕಾರಣಗಳಿಗಾಗಿ ಸದ್ದು ಮಾಡುತ್ತಿದೆ. ಚಿತ್ರದಲ್ಲಿ ನಾಯಕ ಸಿದ್ದಾಂತ ಚತುರ್ವೇದಿ ಮತ್ತು ದೀಪಿಕಾ ಪಡುಕೋಣೆ ಹಸಿಬಿಸಿ ಕಿಸ್ಸಿಂಗ್ ದೃಷ್ಯಗಳು ಪಡ್ಡೆ ಹುಡುಗರ ಮೈ ಜುಂ ಎನ್ನಿಸುವಂತಿದೆ.
ಚಿತ್ರದಲ್ಲಿ ೧೩ ಕಿಸ್ಸಿಂಗ್ ದೃಷ್ಯಗಳಿವೆ. ಅಲ್ಲದೆ ಲಿಪ್ ಟು ಲಿಪ್ ಕಿಸ್ಸಿಂಗ್ ನಿಂದ ಸುಸ್ತಾಗಿದೆ ಎಂದು ದೀಪಿಕಾ ಪಡುಕೋಣೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾಗಿಯೂ ವರದಿಯಾಗಿದೆ.
ಪ್ರಸ್ತುತ ಈ ಚಿತ್ರ ಮತ್ತೊಂದು ಕಾರಣಕ್ಕೆ ಸುದ್ದಿಯಲ್ಲಿದೆ. ಚಿತ್ರದ ನಾಯಕ ನಟ ಸಿದ್ದಾಂತ್‌ನ ನಿಜ ಜೀವನದಲ್ಲೂ ಗೆರಾಯಿಯಾ ಸಿನೇಮಾದ ಕತೆಯೇ ನಡದಿದೆಯಂತೆ !
ಹೌದು , ಬಾಲಿವುಡ್ ಹಂಗಾಮಾಗೆ ನೀಡಿದ ಸಂದರ್ಶನದಲ್ಲಿ ಸಿದ್ದಾಂತ ತಮ್ಮ ಬದುಕಿನಲ್ಲಿ ಗೆರಾಯಿಯಾ ಚಿತ್ರದ ಕತೆಯನ್ನೇ ಹೋಲುವ ಘಟನೆ ನಡೆದಿದೆ ಎಂದು ಹೇಳಿಕೊಂಡಿದ್ದಾರೆ. ಸಿನಿಮಾದಲ್ಲಿ ಗರ್ಲ್ ಫ್ರೆಂಡ್ ಕಸಿನ್ ಜೊತೆಗೆ ನಾಯಕ ಸಿದ್ದಾಂತ ಫ್ಲರ್ಟ್ ಮಾಡುತ್ತಾರೆ. ಸಂದರ್ಶನದಲ್ಲಿ ಸಿದ್ದಾಂತ್‌ಗೆ ಯಾವಾಗಲಾದರೂ ಕಸಿನ್ ಗರ್ಲ್ ಫ್ರೆಂಡ್ ಜತೆ ಫ್ಲರ್ಟ್ ಮಾಡಿದ್ದಿರಾ ಎಂಬ ಪ್ರಶ್ನೆ ಕೇಳಲಾಗಿತ್ತು.ಇದಕ್ಕೆ ಉತ್ತರಿಸಿರುವ ಸಿದ್ದಾಂತ ನನ್ನ ಕಸಿನ್‌ನ ಗರ್ಲ್‌ಫ್ರೆಂಡ್ ನನ್ನ ಜತೆ ಫ್ಲರ್ಟ್ ಮಾಡಿದ್ದಳು. ಆದರೆ, ನಾನು ತಿರುಗಿ ಫ್ಲರ್ಟ್ ಮಾಡಿಲ್ಲಎಂದು ಹೇಳಿದ್ದಾರೆ. ಇದನ್ನು ಕೇಳಿ ಚಲನ ಚಿತ್ರ ತಂಡದವರಿಗೆ ಅಕ್ಷರಶಃ ಶಾಕ್ ಆಗಿದೆಯಂತೆ. ಆದರೆ ಚಿತ್ರದ ನಿರ್ದೇಶಕ ಶಕುನ್ ಬಾತ್ರಾ ಮಾತ್ರ ಸಿದ್ದಾಂತ ಅವರ ಹೇಳಿಕೆಯಿಂದ ಅವರ ಕಸಿನ್ ತೊಂದರೆಗೆ ಸಿಲುಕುತ್ತಾರೆ ಎಂದು ಹಾಸ್ಯ ಮಾಡಿ ನಕ್ಕಿದ್ದಾರೆ ಎಂದು ವರದಿಯಾಗಿದೆ.
ಒಂದೇ ಪ್ರಯಾಣಿಕನಿಗಾಗಿ 9 ತಾಸು ಪ್ರಯಾಣಿಸಿದ ವಿಮಾನ !
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ