Latest

ಮಹಾಭಾರತದ ಭೀಮ ಇನ್ನಿಲ್ಲ

ಪ್ರಗತಿವಾಹಿನಿ ಸುದ್ದಿ ನವದೆಹಲಿ: ದಶಕಗಳ ಹಿಂದೆ ಡಿಡಿ ವಾಹಿನಿಯಲ್ಲಿ ಪ್ರತಿ ಭಾನುವಾರ ಪ್ರಸಾರವಾಗುತ್ತಿದ್ದ ಮಹಾಭಾರತ ಧಾರಾವಾಹಿ ಕೋಟ್ಯಾಂತರ ಟಿವಿ ವೀಕ್ಷಕರ ಮನ ಗೆದ್ದಿತ್ತು, ಕಳೆದ ವರ್ಷ ಲಾಕ್‌ಡೌನ್ ಅವಧಿಯಲ್ಲಿ ಈ ಧಾರಾವಾಹಿಯ ಮರುಪ್ರಸಾರವಾದಗಲೂ ಅಪಾರ ಜನಮೆಚ್ಚುಗೆ ಗಳಿಸಿತ್ತು. ಬಿ. ಆರ್. ಛೋಪ್ರಾ ನಿರ್ಮಾಣದ ಮಹಾಭಾರತ ಧಾರವಾಹಿ ಭಾರತದ ಟಿವಿ ವಾಹಿನಿಯ ಮೈಲಿಗಲ್ಲು ಎಂದೇ ಪ್ರಸಿದ್ಧವಾಗಿದೆ.

ಈ ಮಹಾಭಾರತದ ಧಾರಾವಾಹಿಯಲ್ಲಿ ಮುಖ್ಯಭೂಮಿಕೆಗಳಲ್ಲಿ ಒಂದಾದ ಭೀಮನ ಪಾತ್ರದಲ್ಲಿ ಮಿಂಚಿದ್ದ ಪ್ರವೀಣ್‌ಕುಮಾರ್ ಸೋಬ್ತಿ ತಮ್ಮ ೭೫ನೇ ವಯಸ್ಸಿನಲ್ಲಿ ದೆಹಲಿಯ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮೂಲತಃ ಕ್ರೀಡಾಪುಟುವಾಗಿದ್ದ ಪ್ರವೀಣ್‌ಕುಮಾರ್ ಆಕಸ್ಮಿಕ ಎಂಬAತೆ ನಟನಾ ರಂಗಕ್ಕೆ ಬಂದವರು. ಅವರು ಏಷ್ಯಾಡ್ ಗೇಮ್ಸ್ನಲ್ಲಿ ನಾಲ್ಕು ಬಾರಿ ಡಿಸ್ಕಸ್ ಮತ್ತು ಹ್ಯಾಮರ್ ಥ್ರೋ ನಲ್ಲಿ ಭಾರತಕ್ಕೆ ಪದಕ ತಂದುಕೊಟ್ಟಿದ್ದಾರೆ. ೧೯೬೮ ರ ಮೆಕ್ಸಿಕೊ ಮತ್ತು ೧೯೭೨ರ ಮ್ಯುನಿಚ್ ಓಲಂಪಿಕ್ಸ್ನಲ್ಲಿ ಭಾರತದ ಅಥ್ಲೆಟಿಕ್ ತಂಡದಲ್ಲಿದ್ದ ಕ್ರೀಡಾಪಟುವಾಗಿದ್ದ ಅವರು ಬಿಎಸ್‌ಎಫ್ (ಬಾರ್ಡರ್ ಸೆಕ್ಯುರಿಟಿ ಫೋರ್ಸ್) ನಲ್ಲಿ ಡೆಪ್ಯುಟಿ ಕಮಾಂಡೆAಟ್ ಹುದ್ದೆಯಲ್ಲಿ ಸೇವೆ ಸಲ್ಲಿಸಿದ್ದರು. ಅವರು ಕ್ರೀಡೆಯಲ್ಲಿ ಕೈಗೊಂಡ ಸಾಧನೆಗಾಗಿ ಪ್ರತಿಷ್ಠಿತ ಅರ್ಜುನ ಪ್ರಶಸ್ತಿಗೂ ಭಾಜನರಾಗಿದ್ದರು. ೨೦೧೩ರಲ್ಲಿ ಆಮ್ ಆದ್ಮಿ ಪಕ್ಷದಿಂದ ದೆಹಲಿ ಅಸೆಂಬ್ಲಿ ಚುನಾವಣೆಗೆ ಸ್ಪರ್ಧಿಸಿದ್ದರು.

ಮಹಾಭಾರತದಲ್ಲಿ ಭೀಮನ ಪಾತ್ರದಲ್ಲಿ ಉತ್ತಮ ನಟನೆಯ ಬಳಿಕ ಅವರು ಬಾಲಿವುಡ್‌ಗೂ ಪ್ರವೇಶ ಪಡೆದರು. ಅಮಿತಾಬ್ ಬಚ್ಚನ್‌ರ ಶೆಹೆನ್‌ಶಹಾ, ಧರ್ಮೇಂದ್ರ ಅಭಿನಯದ ಲೋಹಾ, ಆಜ್ ಕಾ ಅರ್ಜುನ್, ಅಜೂಬಾ, ಸನ್ನಿ ಡಿಯೋಲ್‌ರ ಸೂಪರ್ ಹಿಟ್ ಚಲನಚಿತ್ರ ಘಾಯಲ್ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಅವರು ಅಭಿನಯಿಸಿದ್ದರು.

ಕ್ರೀಡಾ ಪಟುವಾಗಿ, ನಟನಾಗಿ, ಸೈನಾಧಿಕಾರಿಯಾಗಿ ವಿವಿಧ ಕ್ಷೇತ್ರಗಳಗಳಲ್ಲಿ ತಮ್ಮದೆ ಆದ ಛಾಪು ಮೂಡಿಸಿದ್ದ ಪ್ರವೀಣ್‌ಕುಮಾರ್ ಸೋಬ್ತಿ ಸೋಮವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಅವರ ಪುತ್ರಿ ನಿಕುನಿಕಾ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಪ್ರವೀಣ್‌ಕುಮಾರ್ ನಿಧನಕ್ಕೆ ಅನೇಕ ಗಣ್ಯರು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

ಸರ್ಕಾರಿ ಪಿಯು ಕಾಲೇಜಿನ ಮೇಲೆ ಕಲ್ಲು ತೂರಾಟ; ವಿದ್ಯಾರ್ಥಿಗೆ ಗಾಯ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button