Kannada NewsLatest

ಹಸೆಮಣೆ ಏರಲು ಸಜ್ಜಾಗಿದ್ದಾರೆ ಕುಂದಾನಗರಿ ಕುವರಿ ಅಕ್ಷತಾ ಕುಕ್ಕಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬಿಗ್ ಬಾಸ್ ಬೆಡಗಿ, ಕುಂದಾನಗರಿಯ ಕುವರಿ ಅಕ್ಷತಾ ಕುಕ್ಕಿ ಶೀಘ್ರವೇ ಹಸೆಮಣೆ ಏರಲು ಸಜ್ಜಾಗಿದ್ದಾರೆ.

ಕುಟುಂಬದ ಹಿರಿಯರೇ ನೋಡಿ ನಿರ್ಧರಿಸಿದ ಹುಡುಗನನ್ನು ಬಾಳ ಸಂಗಾತಿಯಾಗಿ ವರಿಸಲಿದ್ದಾರೆ ಅಕ್ಷತಾ. ಹೀಗಾಗಿ ಸೆಲೆಬ್ರಿಟಿಯಾಗಿದ್ದರೂ ಇವರದ್ದು ಅರೇಂಜ್ಡ್ ಮ್ಯಾರೇಜ್. ಖಾಸಗಿ ಕಂಪನಿಯೊಂದರಲ್ಲಿ ಎಂಜಿನಿಯರ್ ಆಗಿರುವ ಅವಿನಾಶ್ ಅವರನ್ನು ಅಕ್ಷತಾ ವರಿಸಲಿದ್ದಾರೆ.

ಮೊದಲ ಬಾರಿ ಶುರುವಾದ ಬಿಗ್ ಬಾಸ್ ಓಟಿಟಿ ಸೀಸನ್ ನಲ್ಲಿ ಸ್ಪರ್ಧಿಯಾಗಿ ಬಂದು ಗಮನ ಸೆಳೆದಿರುವ ಅಕ್ಷತಾ ಅಕ್ಷತಾ ಕುಕ್ಕಿ ಟಿವಿ ಸೀಸನ್ ಗೆ ಬರುವಲ್ಲಿ ಮಿಸ್ ಮಾಡಿಕೊಂಡಿದ್ದಾರೆ. ಧ್ರುವ ಸರ್ಜಾ ಅವರ ಮಾರ್ಟಿನ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದು ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿದೆ. ಇದರೊಟ್ಟಿಗೇ ಕಿರುತೆರೆಯಲ್ಲೂ ನಟಿಸಿರುವ ಅಕ್ಷತಾ ಈಗ ಸಾಂಸಾರಿಕ ಜೀವನಕ್ಕೆ ಅಡಿಯಿಡುತ್ತಿರುವುದು ಅಭಿಮಾನಿಗಳಿಗೂ ಸಂತೋಷ ತಂದಿದೆ.

ಮಾರ್ಚ್ 27ರಂದು ಬೆಳಗಾವಿಯಲ್ಲಿ ಗುರುಹಿರಿಯರು, ಆಪ್ತೇಷ್ಟರಿಂದ ಅಕ್ಷತೆ ಹಾಕಿಸಿಕೊಂಡು ಅವಿನಾಶ್ ಅರ್ಧಾಂಗಿಯಾಗಲಿದ್ದಾರೆ ಅಕ್ಷತಾ.

Home add -Advt

ಗಂಗಮ್ಮ ಬೊಮ್ಮಾಯಿ ಟ್ರಸ್ಟ್ ನಿಂದ ಪುಸ್ತಕ ಪ್ರಶಸ್ತಿಗೆ ಕೃತಿಗಳ ಅಹ್ವಾನ

https://pragati.taskdun.com/call-for-literary-works-for-book-award-by-bommai-trust/

*ಟಿಪ್ಪುವನ್ನು ಹೊಡೆದು ಹಾಕಿದಂತೆ ಸಿದ್ದರಾಮಯ್ಯರನ್ನು ಹೊಡೆದು ಹಾಕಬೇಕು ಎಂದ ಸಚಿವ ಅಶ್ವತ್ಥನಾರಾಯಣ; ನೀವೇ ಕೋವಿ ಹಿಡಿದು ಬನ್ನಿ; ತೀಕ್ಷ್ಣವಾಗಿ ಪ್ರತಿಕ್ರಿಯೆ ಕೊಟ್ಟ ಸಿದ್ದರಾಮಯ್ಯ*

https://pragati.taskdun.com/ashwaththanarayanasiddaramaiahtippuvidhanasabha-election/

ಪುರುಷರಿಗಾಗಿಯೂ ಬರುತ್ತಿದೆ ಸಂತಾನ ಹರಣ ಮಾತ್ರೆ !

https://pragati.taskdun.com/fertility-control-pills-are-coming-for-men-too/

Related Articles

Back to top button