Kannada NewsKarnataka NewsLatest

*ಆಧಾರ್ ಕಾರ್ಡ್ ಬಳಸುತ್ತಿರುವವರಿಗೆ ಮುಖ್ಯ ಸೂಚನೆ*: *ಕೆಲವೇ ದಿನಗಳ ಗಡುವು*: *ಈ ಕುರಿತ ಅಪ್ಡೇಟ್ ತಕ್ಷಣ ಮಾಡಿ*

ಪ್ರಗತಿವಾಹಿನಿ ಸುದ್ದಿ: ಆಧಾರ್ ಕಾರ್ಡ್ ಬಳಸುವವರಿಗೆ ಸರ್ಕಾರ ಮುಖ್ಯ ಮಾಹಿತಿ ನೀಡಿದೆ. ನೀವು ಹಲವು ವರ್ಷಗಳ ಹಿಂದೆ ಇಮೇಲ್ ಐಡಿ ರಚಿಸಿದ್ದರೆ, ಈಗ ಆ ಇಮೇಲ್ ಬಳಕೆ ಮಾಡುತ್ತಿಲ್ಲದಿದ್ದರೆ ಅಥವಾ ಹಳೆಯ ಇಮೇಲ್ ಬದಲಿಗೆ ಹೊಸ ವಿಳಾಸವನ್ನು ಬಳಸುತ್ತಿದ್ದರೆ ತಕ್ಷಣ ನಿಮ್ಮ ಆಧಾರ್ ಕಾರ್ಡ್‌ನಲ್ಲಿರುವ ಇಮೇಲ್ ವಿವರವನ್ನು ಒಮ್ಮೆ ಪರಿಶೀಲಿಸಿಕೊಳ್ಳಿ. ಕಾರಣ ಆಧಾರ್‌ಗೆ ಸರಿಯಾದ ಇಮೇಲ್ ವಿಳಾಸ ಲಿಂಕ್ ಆಗಿರುವುದು ಪರಿಶೀಲಿಸಲು ಸೂಚಿಸಲಾಗಿದೆ.

ಬ್ಯಾಂಕ್ ಖಾತೆ ತೆರೆಯುವುದರಿಂದ ಹಿಡಿದು ಸರ್ಕಾರಿ ಯೋಜನೆಗಳ ಪ್ರಯೋಜನ ಪಡೆಯುವವರೆಗೆ ಆಧಾರ್ ಕಾರ್ಡ್ ಅನಿವಾರ್ಯ ದಾಖಲೆಯಾಗಿದೆ. ಇಂತಹ ಪ್ರಮುಖ ದಾಖಲೆಯಲ್ಲಿ ಮೊಬೈಲ್ ಸಂಖ್ಯೆ, ವಿಳಾಸ ಸೇರಿದಂತೆ ವೈಯಕ್ತಿಕ ಮಾಹಿತಿ ಸರಿಯಾಗಿರುವುದು ಎಷ್ಟು ಮುಖ್ಯವೋ, ಸಂಪರ್ಕಕ್ಕಾಗಿ ನೀಡಿರುವ ಇಮೇಲ್ ವಿಳಾಸವೂ ಸರಿಯಾಗಿರುವುದು ಅಷ್ಟೇ ಮುಖ್ಯ.

ಇದೀಗ ಆಧಾರ್ ಕಾರ್ಡ್‌ದಾರರಿಗೆ ಇಮೇಲ್ ಐಡಿ ಅಪ್‌ಡೇಟ್‌ಗೆ ಸಂಬಂಧಿಸಿದ ಉಚಿತ ಸೌಲಭ್ಯದ ಬಗ್ಗೆ ಮಾಹಿತಿ ಹರಿದಾಡುತ್ತಿದೆ. ವರದಿಗಳ ಪ್ರಕಾರ, 2026ರ ಡಿಸೆಂಬರ್ 31ರವರೆಗೆ ಈ ಸೌಲಭ್ಯ ಪಡೆಯಬಹುದು ಎನ್ನಲಾಗಿದೆ.

ಹಳೆಯ ಇಮೇಲ್ ಬದಲಿಸಿ ಹೊಸದನ್ನು ಸೇರಿಸುವುದು ಹೇಗೆ? ಇಲ್ಲಿದೆ ಮಾಹಿತಿ.

ಕೆಲವರು ಉದ್ಯೋಗ ಬದಲಿಸಿದಾಗ, ಹೊಸ ಇಮೇಲ್ ಐಡಿ ರಚಿಸಿದಾಗ ಅಥವಾ ಹಳೆಯ ಇಮೇಲ್ ಬಳಕೆ ನಿಲ್ಲಿಸಿದಾಗ ಆಧಾರ್‌ನಲ್ಲಿರುವ ವಿವರವನ್ನು ಅಪ್‌ಡೇಟ್ ಮಾಡಲು ಮರೆತುಬಿಡುತ್ತಾರೆ. ಇದರಿಂದ ಮುಂದಿನ ದಿನಗಳಲ್ಲಿ ಅಗತ್ಯ ಮಾಹಿತಿ ಪಡೆಯುವಾಗ ತೊಂದರೆಯಾಗಬಹುದು.ಹೀಗಾಗಿ ನಿಮ್ಮ ಆಧಾರ್‌ಗೆ ಯಾವ ಇಮೇಲ್ ವಿಳಾಸ ಲಿಂಕ್ ಆಗಿದೆ ಎಂಬುದನ್ನು ಪರಿಶೀಲಿಸಿ. ಹಳೆಯ ವಿಳಾಸ ಬಳಕೆಯಲ್ಲಿಲ್ಲದಿದ್ದರೆ ಹೊಸ ಇಮೇಲ್ ಅಪ್‌ಡೇಟ್ ಮಾಡಿಕೊಳ್ಳುವ ಬಗ್ಗೆ ಗಮನಹರಿಸಿ.

ವರದಿಯ ಪ್ರಕಾರ, ಅಧಿಕೃತ ಆಧಾರ್ ಆ್ಯಪ್‌ನಲ್ಲಿ ‘Free Email Update’ ಆಯ್ಕೆ ಲಭ್ಯವಿದ್ದರೆ ಅದರ ಮೂಲಕ ಪ್ರಕ್ರಿಯೆ ಆರಂಭಿಸಬಹುದು.

ಮೊದಲು ಅಧಿಕೃತ ಆಧಾರ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ಆಧಾರ್ ಸಂಖ್ಯೆ ಮತ್ತು ನೋಂದಾಯಿತ ಮೊಬೈಲ್‌ಗೆ ಬರುವ OTP ಬಳಸಿ ಲಾಗಿನ್ ಆಗಿ.

ಆ್ಯಪ್‌ನಲ್ಲಿರುವ Services ವಿಭಾಗಕ್ಕೆ ತೆರಳಿ.

‘Free Email Update’ ಆಯ್ಕೆ ಕಾಣಿಸಿದರೆ ಅದನ್ನು ಆರಿಸಿಕೊಳ್ಳಿ.

ಹೊಸ ಇಮೇಲ್ ವಿಳಾಸ ನಮೂದಿಸಿ.

ಇಮೇಲ್‌ಗೆ ಬರುವ OTP ಮೂಲಕ ಪರಿಶೀಲನೆ ಪೂರ್ಣಗೊಳಿಸಿ.

ನಂತರ ಅಪ್‌ಡೇಟ್ ಮನವಿ ಸಲ್ಲಿಸಿ.

ಡಿಸೆಂಬರ್ 31ರ ಗಡುವು:

ಈ ಉಚಿತ ಸೌಲಭ್ಯ 2026ರ ಡಿಸೆಂಬರ್ 31ರವರೆಗೆ ಲಭ್ಯವಿರಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ ಈ ಗಡುವು ಮತ್ತು ಉಚಿತ ಸೇವೆಯ ಷರತ್ತುಗಳನ್ನು UIDAI ಅಧಿಕೃತವಾಗಿ ಖಚಿತಪಡಿಸಿಕೊಳ್ಳುವುದು ಮುಖ್ಯ. ಆ್ಯಪ್‌ನಲ್ಲಿ ಈ ಆಯ್ಕೆ ಲಭ್ಯವಿದೆಯೇ ಎಂಬುದನ್ನೂ ಪರಿಶೀಲಿಸಿ.

ನಿಮ್ಮ ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ವಿಳಾಸ ಎರಡೂ ಪ್ರಸ್ತುತ ಬಳಕೆಯಲ್ಲಿವೆಯೇ ಎಂದು ಈಗಲೇ ಪರಿಶೀಲಿಸಿಕೊಳ್ಳಿ ಅಗತ್ಯ ಸಮಯದಲ್ಲಿ ಮಾಹಿತಿ ಪಡೆಯಲು ಇದು ಸಹಾಯವಾಗಬಹುದು.

Related Articles

Back to top button