Belagavi NewsBelgaum NewsCrimeKannada NewsKarnataka NewsNational

*ಆದಿತ್ಯರಾಜ್ ತನಿಖೆಯೂ ಸಿಐಡಿಗೆ: ಡಿಸಿ ಮೋಹಮ್ಮದ ರೋಷನ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ಆದಿತ್ಯರಾಜ್ ಕ್ಯಾಪಿಟಲ್ ಖಾಸಗಿ ಕಂಪನಿ ಮೇಲೆ ನಡೆದ ದಾಳಿ ಪ್ರಕರಣ ಕುರಿತು ಬೆಳಗಾವಿಯಲ್ಲಿ ಡಿಸಿ ಮೊಹಮ್ಮದ್ ರೋಷನ್ ಹಾಗೂ ನಗರ ಪೊಲೀಸ್ ಕಮೀಷನರ್ ಭೂಷಣ್ ಬೋರಸೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಹತ್ವದ ಮಾಹಿತಿ ನೀಡಿದ್ದಾರೆ.

ಇಂದು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯ ಲ್ಲಿ ಜಂಟಿ  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು ಈಗಾಗಲೇ ಆದಿತ್ಯರಾಜ್ ಕ್ಯಾಪಿಟಲ್ ಸಂಸ್ಥೆಯ ಮೇಲೆ ಎಫ್ ಐ ಆರ್ ದಾಖಲು‌ ಮಾಡಿದ್ದೇವೆ.‌ ಈ ಹಿಂದೆ ಶಿವಂ ಅಸೋಸಿಯೇಟ್ ಮೇಲೆ ದಾಳಿ ಮಾಡಲಾಗಿತ್ತು. ಅದು ತುಂಬ ಯಶಸ್ವಿ ದಾಳಿ ಆಗಿದೆ. ಅದೇ ರೀತಿ ಆದಿತ್ಯರಾಜ್ ಕ್ಯಾಪಿಟಲ್ ಸಂಸ್ಥೆಯ ಮೇಲೆ ನನ್ನ ಆದೇಶದ ಮೇಲೆ ಎಸಿ ಶ್ರವಣ್ ನಾಯಕ್ ದಾಳಿ ಮಾಡಿದ್ದಾರೆ. ಆದಿತ್ಯರಾಜ್ ಕ್ಯಾಪಿಟಲ್ ಎರಡು ರೀತಿಯ ಕೆಲಸ ಮಾಡಿದೆ. ಹಣವನ್ನು ಸಂಗ್ರಹಿಸಿ ಎರಡು ರೀತಿಯಲ್ಲಿ ಬಳಕೆ ಮಾಡಿದೆ. ಆದರೂ ಇವರ ಬಳಿ ಯಾವುದೇ ಅನುಮತಿ ಇಲ್ಲ ಎಂದು ತಿಳಿಸಿದರು.

Home add -Advt

ತಿಂಗಳಿಗೆ ಶೇ 5 ರಷ್ಟು ಬಡ್ಡಿ ಕೊಡುವ ಆಮೀಷವೊಡ್ಡಲಾಗಿದೆ.  ಶೇಕಡಾ ಐದರಷ್ಟು ರಷ್ಟು ಬಡ್ಡಿ ಹಾಗೆ ಶೇಕಡಾ ಐದರಷ್ಟು ಅಸಲು ನೀಡುವ ಒಪ್ಪಂದ ಮಾಡಲಾಗಿದೆ. ಒಪ್ಪಂದದಲ್ಲಿ ರಿಸ್ಕ್ ಬಗ್ಗೆ ಎಲ್ಲಿಯೂ ಉಲ್ಲೇಖಿಸಿಲ್ಲ. ಇದು ಒಂದು ಪಾಂಜಿ ಸ್ಕಿಂಗೆ ಈ ಪ್ರಕರಣ ಮಾದರಿ. 7 ಸಾವಿರ ಜನ ಹೂಡಿಕೆ ಮಾಡಿ ವಂಚನೆಗೆ ಒಳಗಾಗಿದ್ದಾರೆ. ಪ್ರಕರಣ 50 ಕೋಟಿ ಮೀರಿದ್ದು, ಪ್ರಕರಣ ಸಿಐಡಿಗೆ ಹಸ್ತಾಂತರ ಮಾಡಲಾಗುವುದು. ಠೇವಣಿ ಹಣ ಎಲ್ಲಿ ಹೂಡಿಕೆ ಮಾಡ್ತಾರೆ ಎಂದು ಹೇಳಲ್ಲ. ಹಣ ಹೂಡಿಕೆ ಮಾಡಿದವರಿಗೆ ಚೆಕ್ ನೀಡಿದ್ದಾರೆ. ನಿನ್ನೆ ವರದಿ ಬಂದಿದ್ದು ಅಪರ ಮುಖ್ಯ ಕಾರ್ಯಾದರ್ಶಿಗೆ ವರದಿ ಕಳುಸಿದ್ದೇನೆ ಎಂದರು.

ಆದಿತ್ಯರಾಜ್ ಕ್ಯಾಪಿಟಲ್ ಸಂಸ್ಥೆಯ ಸಿಇಓ ಬಲಮಾರ್ ಮಾನೆ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ ಮಾಡಿ ಎಲ್ಲಾ ಏರ್ ಪೋರ್ಟ್ ಗಳಿಗೆ ಮಾಹಿತಿ ‌ರವಾನಿಸಲಾಗಿದೆ.‌ ಆತ ಸದ್ಯ ಪರಾರಿಯಾಗಿದ್ದು, ದೇಶ ಬಿಟ್ಟು ಹೋಗದಂತೆ ಕ್ರಮ ವಹಿಸುತ್ತೇವೆ ಎಂದರು.

ಇದೇ ವೇಳೆ ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ ಮಾತನಾಡಿ, ಸಹಕಾರ ಇಲಾಖೆಯ ಅಧಿಕಾರಿಗಳ ದೂರಿನ ಅನ್ವಯ ಟಿಳಕವಾಡಿ ‌ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ರೇಡ್ ಮಾಡುವಾಗ ಕಂಪ್ಯೂಟರ್‌ ಫಾರ್ಮೆಟ್ ಮಾಡಿರೋದು ಪತ್ತೆಯಾಗಿದೆ. ಈಗಾಗಲೇ ಆದಿತ್ಯರಾಜ್ ಗೆ ಸೇರಿದ ಮೂರು ಕಂಪನಿಯ ವಿರುದ್ಧ ಕೇಸ್ ದಾಖಲಿಸಲಾಗಿದೆ. ಕಂಪನಿಯ ಸಿಇಓ ಬಾಲರಾಜ್ ಬಂಧನಕ್ಕೆ ಮೂರು ವಿಶೇಷ ತಂಡ ರಚಿಸಲಾಗಿದೆ. ಆದಿತ್ಯರಾಜ್ ಕಂಪನಿ ಯಾವುದೇ ಅನುಮತಿ ಪಡೆದಿಲ್ಲ. ಠೇವಣಿ ಹಣಕ್ಕೆ ತಿಂಗಳಿಗೆ ಶೇಕಡಾ ಐದರಷ್ಟು ಬಡ್ಡಿಯ ಕೋಡುವ ಭರವಸೆ ನೀಡಿದ್ರು. 6500 ಹೂಡಿಕೆದಾರರ ಬಗ್ಗೆ ಮಾಹಿತಿ ಇದೆ. ಸಿಐಡಿಗೆ ಕೇಸ್ ವರ್ಗವಾಣೆ ಮಾಡಲು ಪತ್ರ ಬರೆದಿದ್ದೇವೆ. ಮೂರು ಕಡೆ ದಾಳಿ ಮಾಡಿ ಲ್ಯಾಪ್‌ಟಾಪ್ ಸೀಜ್ ಮಾಡಿದ್ದೇವೆ. ಶಿವಂ ಅಸೋಸಿಯೇಟ್ ದಾಳಿ ಬಳಿಕ ಆದಿತ್ಯರಾಜ್ ಕ್ಯಾಪಿಟಲ್ ನವರು ಎಚ್ಚತ್ತುಕೊಂಡಿದ್ದಾರೆ. ಸಾಕ್ಷ್ಯ ನಾಶದ ಪ್ರಯತ್ನವನ್ನು ಮಾಡಿದ್ದಾರೆ. ಕಂಪನಿಯ ಸಿಬ್ಬಂದಿ ಯಾವುದೇ ರೀತಿಯ ಸಹಕಾರ ನೀಡುತ್ತಿಲ್ಲ ಎಂದರು.

Related Articles

Back to top button