Kannada NewsLatest
ಮತ್ತೆ 60 ಲಕ್ಷ ರೂ ಬಂಗಾರದ ಆಭರಣ ವಶ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅರಬಾವಿ ವಿಧಾನ ಸಭಾ ಕ್ಷೇತ್ರದ ಹಳ್ಳೂರು ಬಳಿ 1025 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ಚುನಾವಣಾ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ. ಇದರ ಮೌಲ್ಯ 60.47 ಲಕ್ಷ ರೂ.
ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ ಆಭರಣಗಳನ್ನು ಪೊಲೀಸರು ಮತ್ತು ಚುನಾವಣೆ ಸಿಬ್ಬಂದಿ ಸೇರಿ ವಶಪಡಿಸಿಕೊಂಡರು.
ಬುಧವಾರ ಬೆಳಗಾವಿ ಜಿಲ್ಲೆಯಲ್ಲಿ ಒಟ್ಟೂ 2.11 ಕೋಟಿ ರೂ ನಗದು ಮತ್ತು 60.47 ಲಕ್ಷ ರೂ. ಆಭರಣ ವಶಪಡಿಸಿಕೊಂಡಂತಾಗಿದೆ.




