Karnataka NewsLatest

*ಮಾಜಿ ಶಾಸಕ ಮೊಯಿದ್ದೀನ್ ಬಾವ ಸಹೋದರ ನಾಪತ್ತೆ: ಮಂಗಳೂರು ಸೇತುವೆ ಬಳಿ ಕಾರು ಪತ್ತೆ*

ಪ್ರಗತಿವಾಹಿನಿ ಸುದ್ದಿ: ಮಾಜಿ ಶಾಸಕ ಮೊಯಿದ್ದೀನ್ ಬಾವ ಅವರ ಸಹೋದರ ನಾಪತ್ತೆಯಾಗಿದ್ದು ಮಂಗಳೂರು ಬಳಿ ಸೇತುವೆ ಬಳಿ ಅವರ ಕಾರು ಪತ್ತೆಯಾಗಿದೆ.

ಮೊಯಿದ್ದೀನ್ ಬಾವ ಅವರ ಸಹೋದರ ಮುಮ್ತಾಜ್ ಅಲಿ (52) ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾರೆ. ಇದೀಗ ಅವರ ಕಾರು ಮಂಗಳೂರು ಬಳಿ ಕುಳೂರು ಸೇತುವೆ ಬಳಿ ಅವರ BMW ಕಾರು ಪತ್ತೆಯಾಗಿದೆ.

Home add -Advt

ಮುಮ್ತಾಜ್ ಅಲಿ ಅವರೇ ಕಾರನ್ನು ಚಲಾಯಿಸಿಕೊಂಡು ಬಂದಿದ್ದರು ಎನಲಾಗಿದೆ. ಅಲ್ಲದೇ ತಾನು ಸಾಯುತ್ತಿದ್ದೇನೆ ಎಂದು ಮಗನಿಗೆ ಮೆಸೇಜ್ ಹಾಕಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸೇತುವೆಯಿಂದ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರಾ ಎಂಬ ಶಂಕೆ ವ್ಯಕ್ತವಾಗಿದ್ದು, ಸ್ಥಳಕ್ಕೆ ಮುಳುಗು ತಜ್ಞರು , ಪೊಲೀಸರು ಆಗಮಿಸಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.

Related Articles

Back to top button