Latest

ತೇಜಸ್ ಯುದ್ಧ ವಿಮಾನದಲ್ಲಿ ಹಾರಾಡಿದ ಸಂಸದ ತೇಜಸ್ವಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏರೋ ಇಂಡಿಯಾ ಏರ್ ಶೋ ನಲ್ಲಿ ತೇಜಸ್ ಯುದ್ಧ ವಿಮಾನದಲ್ಲಿ ಸಂಸದ ತೇಜಸ್ವಿ ಸೂರ್ಯ ಹಾರಾಟ ನಡೆಸಿ ಗಮನ ಸೆಳೆದರು.

ತೇಜಸ್ವಿ ಸೂರ್ಯ ಸುಮಾರು 30 ನಿಮಿಷಗಳ ಕಾಲ ತೇಜಸ್ ಕೋ ಪೈಲಟ್ ಆಗಿ ಆಗಸದಲ್ಲಿ ವಿಹರಿಸಿದರು. ಈ ವೇಳೆ ಮಾತನಾಡಿದ ಅವರು, ಸ್ವದೇಶಿ ನಿರ್ಮಿತ ತೇಜಸ್ ಯುದ್ಧ ವಿಮಾನ ನಮ್ಮ ಹೆಮ್ಮೆ ಎಂದರು.

ವಿಶ್ವದಲ್ಲೇ ಅತ್ಯಂತ ಹಗುರ ಹಾಗೂ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯಬಲ್ಲ ತೇಜಸ್ ಈಗ ಮತ್ತಷ್ಟು ಬಲಿಷ್ಠವಾಗಲು ಎರಡನೇ ಯೋಜನೆ ಆರಂಭವಾಗುತ್ತಿರುವುದು ಸಂತಸದ ವಿಚಾರ. ತೇಜಸ್ ನಿರ್ಮಾಣಕ್ಕೆ ಹೆಚ್ ಎ ಎಲ್ ಗೆ ಜವಾಬ್ದಾರಿ ನೀಡಿರುವುದಕ್ಕೆ ಪ್ರಧಾನಿ ಮೋದಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿದರು.

Home add -Advt

Related Articles

Back to top button