Latest

*AKBMS ಚುನಾವಣೆ ಎಸ್.ರಘುನಾಥ ಆಯ್ಕೆ*

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (AKBMS) ಅಧ್ಯಕ್ಷರಾಗಿ ಎಸ್.ರಘುನಾಥ ಆಯ್ಕೆಯಾಗಿದ್ದಾರೆ.

ಅವರು ಭಾನುಪ್ರಕಾಶ ಶರ್ಮ ಅವರ ವಿರುದ್ಧ 2,164 ಮತಗಳಿಂದ ಗೆಲುವು ಸಾಧಿಸಿದ್ದಾರೆ. ಭಾನುಪ್ರಕಾಶ್ ಶರ್ಮ ಅವರಿಗೆ 11,235 ಮತಗಳು ಬಿದ್ದರೆ, ಎಸ್ . ರಘುನಾಥ್ ಅವರಿಗೆ 13,399 ಮತಗಳು ಲಭಿಸಿವೆ.

ಭಾರಿ ತುರುಸಿನಿಂದ ಚುನಾವಣೆ ನಡೆದಿದ್ದು, ನಿಕಟಪೂರ್ವ ಅಧ್ಯಕ್ಷ ಅಶೋಕ ಹಾರ್ನಳ್ಳಿ ಅವರು ಭಾನುಪ್ರಕಾಶ ಶರ್ಮ ಅವರನ್ನು ಬೆಂಬಲಿಸಿದ್ದರು. ಇದೀಗ ಹಾರ್ನಳ್ಳಿ ಗುಂಪಿಗೆ ಹಿನ್ನಡೆ ಆದಂತಾಗಿದೆ.

Home add -Advt

ಬ್ರಾಹ್ಮಣ ಸಮುದಾಯ ಮಕ್ಕಳ ಶಿಕ್ಷಣ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಸಮಾಜದ ಮುಖ್ಯವಾಹಿನಿ ತರಲು ನಮ್ಮ ಯೋಜನೆ-ಎಸ್.ರಘುನಾಥ್

ಬೆಂಗಳೂರು:ಅಧ್ಯಕ್ಷೀಯ ಅಭ್ಯರ್ಥಿಯಾದ ಎಸ್. ರಘುನಾಥ್ ರವರು ಮತ್ತು ವೇದಬ್ರಹ್ಮ ಭಾನುಪ್ರಕಾಶ್ ರವರು ನಡುವೆ ಸ್ಪರ್ಧೆ .

ಎಸ್.ರಘುನಾಥ್ ರವರು ಮತಗಳು ವೇದಬ್ರಹ್ಮ ಭಾನುಪ್ರಕಾಶ್ ಶರ್ಮ ರವರು ಮತಗಳು ಪಡೆದರು.

ಎಸ್.ರಘುನಾಥ್ ರವರು ಮಾತನಾಡಿ ರಾಜ್ಯದಲ್ಲಿ 45ಲಕ್ಷ ಬ್ರಾಹ್ಮಣರ ಜನಸಂಖ್ಯೆ ಇದೆ ನಮ್ಮಲ್ಲಿ ಆರ್ಥಿಕವಾಗಿ ಹಿಂದುಳಿದವರು ಹೆಚ್ಚಿನ ಜನಸಂಖ್ಯೆಯಲ್ಲಿ ಇದ್ದಾರೆ.

ನಮ್ಮಲ್ಲಿ ಪೌರೋಹಿತ್ಯ, ಅಡುಗೆ ಕೆಲಸ ಮಾಡುವವರು ಹಾಗೂ ಅರ್ಚಕ ವೃತ್ತಿ ಮಾಡುವವರು ಇನ್ನಿತರೆ ವೃತ್ತಿ ಮಾಡುವವರು ಮಕ್ಕಳಿಗೆ ಶಿಕ್ಷಣ, ಉದ್ಯೋಗದಲ್ಲಿ ಹೆಚ್ಚಿನ ಅವಕಾಶ ಸಿಗಬೇಕು ಮತ್ತು ವೃತ್ತಿ ಭಾಂದವರಿಗೆ ಆರ್ಥಿಕವಾಗಿ ಶಕ್ತಿ ತುಂಬಬೇಕು ಅವರು ಸಹ ಎಲ್ಲರಂತೆ ಸಮಾಜದ ಮುಖ್ಯವಾಹಿನಿ ತರಬೇಕು ಎಂದು ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ.

ವಿಪ್ರ ಹಿರಿಯ ಸಾಧಕರುಗಳಾದ ಸಿ.ವಿ.ಎಲ್.ಶಾಸ್ತ್ರಿ, ಬಿ.ಎನ್.ಸುಬ್ರಮಣ್ಯರವರ ಅಭಿಮಾನಿಗಳು ಸ್ನೇಹಿತರು ಸಂಪೂರ್ಣ ಬೆಂಬಲ ನೀಡಿದ್ದಾರೆ. ಮತ್ತು ಮಾಜಿ ಅಧ್ಯಕ್ಷರಾದ ಎಂ.ಆರ್.ವಿ.ಪ್ರಸಾದರವರು, ಕಳೆದ ಬಾರಿ ಅಧ್ಯಕ್ಷ ಸ್ಥಾನಕ್ಕೆ ನಿಂತಿದ್ದ ಆರ್.ಲಕ್ಷ್ಮಿಕಾಂತ್ ರವರು ಸಹ ಸಹಕಾರ ನೀಡಿದರು

ವಿಪ್ರ ಸಮುದಾಯದ ಏಳಿಗೆಗಾಗಿ 100ಕೋಟಿ ದೇಣಿಗೆ ಸಂಗ್ರಹ ಮಾಡಿ ದತ್ತಿ ನಿಧಿ ಸ್ಥಾಪನೆ ಮಾಡಿ , ಅದರಿಂದ ಶಿಕ್ಷಣ ಸಂಸ್ಥೆ ನಿರ್ಮಾಣ ಮಾಡಿ ವಿಪ್ರ ಸಮುದಾಯದ ಮಕ್ಕಳಿಗೆ ಅವಕಾಶ ನೀಡುವುದು ಹಾಗೂ ವಿಶ್ರಾಂತಿ ಭವನ ನಿರ್ಮಾಣ .

ಉದ್ಯೋಗ ಮೇಳ , ಸಾಮೂಹಿಕ ಉಪನಯನ ಮತ್ತು ವಧು-ವರ ಆನ್ವೇಷಣೆ ಕೇಂದ್ರ, ವಿಕಲಚೇತನರಿಗೆ ಸಹಾಯಧನ ಮತ್ತು ಸದಸ್ಯತ್ವ ಅಭಿಯಾನ ರಾಜ್ಯಾದ್ಯಂತ ಚುರುಕುಗೊಳಿಸುವುದು ವಿಪ್ರ ಸಮುದಾಯದ ಅಭಿವೃದ್ದಿಗೆ ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ.

ನಮ್ಮ ಜೊತೆಯಲ್ಲಿ ಉತ್ತಮ ತಂಡವಿದೆ ಸಾಧನೆ ಮತ್ತು ಯೋಜನೆಗಳನ್ನು ವಿಪ್ರರಿಗೆ ತಿಳಿಸಿ ಮತಯಾಚನೆ ಮಾಡಲಾಗುತ್ತಿದೆ.

ಸರ್ಕಾರದಲ್ಲಿ ಮೇಲ್ವರ್ಗದವರಿಗೆ ಉದ್ಯೋಗ, ಶಿಕ್ಷಣದಲ್ಲಿ ಮೀಸಲಾತಿ ಕಡ್ಡಾಯಗೊಳಿಸಲು ಹೋರಾಟ.

ನನ್ನ ಗೆಲುವಿಗೆ ವಿಪ್ರ ಸಮುದಾಯದ ಮುಖಂಡರು, ಕಾರ್ಯಕರ್ತರು ಸ್ನೇಹಿತರು ನಾಡಿನ ಸಮಸ್ತ ವಿಪ್ರ ಕುಲ ಭಾಂದವರಿಗೆ ಹೃತ್ವೂರ್ವಕ ಧನ್ಯವಾದಗಳು ಎಂದು ಹೇಳಿದರು..

ರಾಜ್ಯದಲ್ಲಿ 66ಸಾವಿರ ಮತದಾರರು, ಬೆಂಗಳೂರುನಗರ ಪ್ರದೇಶದಲ್ಲಿ 34ಸಾವಿರ ಮತದಾರರು ಇದ್ದಾರೆ.
ಬೆಳಗ್ಗೆ 8ರಿಂದ 4ಗಂಟೆಗೆ ವರಗೆ ಮತದಾನ ನಂತರ ಮತ ಎಣಿಕೆ ಕಾರ್ಯ ಜರುಗಿತು.

ಬೆಂಗಳೂರುನಗರ ಪ್ರದೇಶದಲ್ಲಿ 8 ಜಿಲ್ಲಾ ಪ್ರತಿನಿಧಿ ಸ್ಥಾನಗಳಿಗೂ ಚುನಾವಣೆ ನಡೆಯುತ್ತಿದೆ. ದಕ್ಷಿಣ ಜಿಲ್ಲಾ ಪ್ರತಿನಿಧಿ 4ಸ್ಥಾನ ಹಾಗೂ ಕೇಂದ್ರ ಜಿಲ್ಲಾ ಪ್ರತಿನಿಧಿ 2 ಸ್ಥಾನ, ಉತ್ತರ ಜಿಲ್ಲಾ ಪ್ರತಿನಿಧಿ 2ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ.
ಮತದಾನ ಕೇಂದ್ರಗಳು ಮೂರು ಕಡೆಗಳಲ್ಲಿ ಸ್ಥಾಪಿಸಲಾಗಿತ್ತು ರಾಯರಾಯ ಕಲ್ಯಾಣ ಮಂಟಪ, ಚಂದ್ರಶೇಖರಭಾರತಿ ಕಲ್ಯಾಣ ಮಂಟಪ ಮತ್ತು ಎ.ಪಿ.ಎಸ್.ಕಾಲೇಜು ಮತ್ತು ರಾಜ್ಯದ ಹಲವಾರು ಜಿಲ್ಲೆಗಳಲ್ಲಿ 1000ಕ್ಕೂ ಮತ ಇರುವ ಜಿಲ್ಲೆಗಳಲ್ಲಿ ಮತಗಟ್ಟೆ ಸ್ಥಾಪನೆ ಆಯಾ ಮಾಡಿ ಜಿಲ್ಲೆಯವರು ಅಲ್ಲಿಯೆ ಮತ ಮಾಡುವಂತೆ ವ್ಯವಸ್ಥೆ ಮಾಡಲಾಗಿತ್ತು.

Related Articles

Back to top button