Latest

ಪ್ರಶಸ್ತಿಗೆ ಪುಸ್ತಕಗಳ ಆಹ್ವಾನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನ (ಟ್ರಸ್ಟ್) 2022ನೇ ಸಾಲಿನ ಬೇರೆ ಬೇರೆ ಸಾಹಿತ್ಯ ಪ್ರಕಾರ ಕೃತಿಗಳನ್ನು ಪ್ರಶಸ್ತಿಗಳಿಗಾಗಿ ಆಹ್ವಾನಿಸಿದೆ.

ಪುಸ್ತಕ ಕಳುಹಿಸಲು ಕೊನೆಯ ದಿನಾಂಕ ಆಗಸ್ಟ್ 15 ಇರುತ್ತದೆ. ಬೆಳಗಾವಿ ಜಿಲ್ಲೆಯ ಲೇಖಕರು, ಸಾಹಿತಿಗಳು, ಕವಿಗಳು ಪ್ರಶಸ್ತಿಗೆ ತಮ್ಮ 3 ಪ್ರತಿಗಳನ್ನು ನೀರಜಾ ಗಣಾಚಾರಿ ಕಾರ್ಯದರ್ಶಿಗಳು, ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನ, 255, ವಿಜಯಾ ರೆಸಿಡೆನ್ಸಿ, ಗುರುಪ್ರಸಾದ ಕಾಲೋನಿ, ಮುಖ್ಯ ರಸ್ತೆ , ತಿಲಕವಾಡಿ ಬೆಳಗಾವಿ – 06 ಈ ವಿಳಾಸಕ್ಕೆ ಕಳುಹಿಸಬೇಕು. ಕೃತಿಗಳನ್ನು ಕಳುಹಿಸುವವರು ಬೆಳಗಾವಿ ಜಿಲ್ಲೆಯವರೇ ಆಗಿರಬೇಕು. ಪುಸ್ತಕಗಳು 2022ನೇ ಸಾಲಿನಲ್ಲಿ ಪ್ರಕಟಗೊಂಡಿರಬೇಕು.

ಪುಸ್ತಕಗಳನ್ನು ಕಳುಹಿಸುವವರು ಸಂಪೂರ್ಣ ಅಂಚೆ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ತಪ್ಪದೇ ಬರೆದು ಆಗಸ್ಟ್ 15 ರೊಳಗೆ ಕಳುಹಿಸಿಕೊಡಬೇಕು. ಹೆಚ್ಚಿನ ವಿವರಗಳಿಗಾಗಿ 9481656405, ,9845599144 ಅಥವಾ 9448637797 ಕ್ಕೆ ಸಂಪರ್ಕಿಸ ಬಹುದಾಗಿದೆ.

https://pragati.taskdun.com/a-special-article-on-masti-venkatesh-ayyangar/

Home add -Advt

https://pragati.taskdun.com/gruhajyoti-yojaneguidlinerealese/

https://pragati.taskdun.com/kanteerava-narasimharaja-wadiyar135th-birthdaykannada-sahitya-parishath/

Related Articles

Back to top button