ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಯುವ ಜನಾಂಗವು ದೇಶದ ಸಂಪತ್ತಾಗಿದ್ದು ಸಂಸ್ಕೃತಿ ಪರಂಪರೆ ಹಾಗೂ ಪರಿಸರವನ್ನು ತಿಳಿದುಕೊಳ್ಳುವುದು ಅವಶ್ಯವಾಗಿದೆ. ಪರಿಸರವನ್ನು ಸಂರಕ್ಷಿಸಿ ಅದನ್ನು ಪೋಷಿಸಿ ಬೆಳೆಸುವುದು ಕೂಡ ನಮ್ಮಕರ್ತವ್ಯ ಎನ್ಸಿಸಿಯ ಪ್ರಮುಖ ಧೈಯವಾಗಿದೆ ಎಂದು ಕರ್ನಾಟಕ ಮತ್ತು ಗೋವಾ ಏನ್ ಸಿ ಸಿ ಡೈರೆಕ್ಟರೇಟ್ (ನಿರ್ದೇಶನಾಲಯ) ಡೆಪುಟಿ ಡೈರೆಕ್ಟರ್ ಆಫ್ ಜನರಲ್ ಬಿ ಅರುಣ್ ಕುಮಾರ್ ಹೇಳಿದರು.
ಬೆಳಗಾವಿಯ ಜಾಧವ ನಗರದಲ್ಲಿ ಬೆಳಗಾವಿ ಎನ್ಸಿಸಿ ಗ್ರೂಪ್ ಅಡಿಯಲ್ಲಿ ಡಿಸೆಂಬರ ೧೫ ದಿಂದ ೨೨ರವರೆಗೆ ಜರುಗುತ್ತಿರುವ ಅಖಿಲ ಭಾರತ ಟ್ರ್ಯಾಕಿಂಗ್ (ಚಾರಣ) ಶಿಬಿರಕ್ಕೆ ಅವರು ಭೆಟ್ಟಿ ನೀಡಿ ಮಾತನಾಡಿದರು. ಈ ಶಿಬಿರವು ಯುವಕರಲ್ಲಿ ಸಾಹಸ ಪ್ರವೃತ್ತಿಯನ್ನು ಮೂಡಿಸಲಿದೆ ಎಂದರು.
ಯುವ ಸಮುದಾಯದಲ್ಲಿ ರಾಷ್ಟ್ರೀಯ ಹಾಗೂ ಪ್ರಜ್ಞೆಯನ್ನು ಮೂಡಿಸುವುದು ಪರಿಸರದ ಕಾಳಜಿಯ ಬಗ್ಗೆ ಜಾಗೃತಿಯನ್ನು ಹುಟ್ಟು ಹಾಕುವುದು ಶಿಬಿರದ ಉದ್ದೇಶವೆಂದರು. ವಿವಿಧ ರಾಜ್ಯಗಳಿಂದ ಆಗಮಿಸಿರುವ ವಿದ್ಯಾರ್ಥಿಗಳು ಒಟ್ಟಾಗಿ ಬೆಳಗಾವಿಯ ಸುತ್ತಮುತ್ತಲಿನ ಪ್ರಾಕೃತಿಕ ಸೌಂದರ್ಯವನ್ನು ಸವಿಯಲಿದ್ದಾರೆ. ಸೌಜನ್ಯತೆಗಳನ್ನು ಸಮಯ ಪಾಲನೆಯನ್ನು ಅಳವಡಿಸಿಕೊಂಡು ಸಮಾಜಕ್ಕೆತಮ್ಮದೇ ಆದ ಕೊಡುಗೆಯನ್ನು ನೀಡಬೇಕು. ನಾವು ಪ್ರಕೃತಿಯ ಭಾಗವಾಗಿದ್ದು ಅಂತಹ ಪ್ರಕೃತಿ ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ಪ್ರಕೃತಿಯೊಂದಿಗೆ ನಾವು ಬೆರೆಯಬೇಕು. ಪ್ರಕೃತಿ ಸೌಂದರ್ಯವನ್ನು ಸವಿಯಬೇಕು ಜಾಗೃತಿಯನ್ನು ಮುಟ್ಟಿಸಬೇಕು. ಮುಂದುವರಿದು
ಅವರು ಮಾತನಾಡಿ, ಎನ್ಸಿಸಿಕೆಡೆಟ್ಗಳಲ್ಲಿ ಸಾಹಸಮಯ ಮತ್ತು ಪರಿಶೋಧನಾತ್ಮಕ ಮನೋಭಾವವನ್ನು ಬೆಳೆಸಿಸುವದು, ದೈಹಿಕ ಸಾಮರ್ಥ್ಯ, ಸಹಿಷ್ಣುತೆ, ಆತ್ಮ ವಿಶ್ವಾಸ, ತಂಡದ ಮನೋಭಾವ ಮತ್ತು ಉತ್ಸಾಹವನ್ನು ಬೆಳೆಸಿಸುವದು. ಪ್ರಕೃತಿಯಲ್ಲಿಯ ಸಸ್ಯ ಮತ್ತು ಪ್ರಾಣಿಗಳ ಬಗ್ಗೆ ಪ್ರೀತಿಯನ್ನು ಬೆಳೆಸಿಸುವದು. ಪರಿಸರ ಅರಣ್ಯ, ವನ್ಯಜೀವಿ, ಪರಿಸರ ಸಮತೋಲನದ ಸಂರಕ್ಷಣೆಗಾಗಿ ಕಾಳಜಿಯನ್ನು ಅಭಿವೃದ್ಧಿಪಡಿಸುವುದು, ಪ್ರಾಚೀನ ಸ್ಮಾರಕಗಳು ಮತ್ತು ಸ್ವಚ್ಛತೆ, ಸ್ಥಳೀಯ ಪದ್ಧತಿ ಕುರಿತು ಅರಿವನ್ನುಂಟು ಮಾಡುವುದು ಈ ಶಿಬಿರದ ಉದ್ದೇಶವಾಗಿದೆ ಎಂದು ಹೇಳಿದರು.
ದೇಶದ ನಾನಾ ಭಾಗಗಳಿಂದ ಆಗಮಿಸಿರುವ ಎನ್ಸಿಸಿ ಕೆಡೆಟ್ಗಳು ಒಟ್ಟಿಗೆ ವಾಸಿಸುವ ಮೂಲಕ ರಾಷ್ಟ್ರೀಯ ಪ್ರಜ್ಞೆಏಕತೆಯನ್ನು ಉತ್ತೇಜಿಸಲಿದ್ದಾರೆ ಹೇಳಿದರು.
ಈ ಚಾರಣ ಶಿಬಿರದಲ್ಲಿ ಕರ್ನಾಟಕ, ಗೋವಾ, ಆಂಧ್ರಪ್ರದೇಶ, ತೆಲಂಗಾಣ, , ಗುಜರಾತ್, ತಮಿಳುನಾಡು, ಪಾಂಡಿಚೇರಿ ಕೇರಳ, ಲಕ್ಷದೀಪ ದಿಂದ ೫೧೦ ಎನ್ ಸಿ ಸಿ ಕೆಡೆಟ್ ಗಳು, 15ncc ಅಧಿಕಾರಿಗಳು ಪಾಲ್ಗೊಂಡಿದ್ದಾರೆ.
ಈ ಸಂದರ್ಭದಲ್ಲಿ ಬೆಳಗಾವಿ ಗ್ರೂಪ್ ಎನ್ಸಿಸಿಯ ಕಮಾಂಡರ ಕರ್ನಲ್ ಮೋಹನ್ ನಾಯಕ್, 26 ಕರ್ನಾಟಕ ಏನ್ ಸಿ ಸಿ ಬಟಾಲಿಯನ್ ಅಧಿಕಾರಿ ಕರ್ನಲ್ ಸುನಿಲ್ ದಾಗರ್, ಲೆಫ್ಟಿನೆಂಟ್ ಕರ್ನಲ್ ಸಿದ್ದಾರ್ಥ್ ರೇಡು, 8 ಏರ್ ಕಮಾಂಡರ್ ದೀಪಕ್ ಬಲೇರಾ, ಸುಬೇದಾರ್ ಮೇಜರ್ಕಲ್ಲಪ್ಪ ಪಾಟೀಲ್, ಮೆಜರ ಮಹೇಶ ಗುರನಗೌಡರ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ