*ಜ್ಞಾನವಿಕಾಸ ಕಾರ್ಯಕ್ರಮದ ಮುಖೇನ ಮಹಿಳೆಯರ ಸರ್ವಾಂಗೀಣ ಅಭಿವೃದ್ಧಿ- ಜಿ ಆರ್ ಸೋನೆರ್*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಹಿಳೆಯರು ಸಾಮಾಜಿಕವಾಗಿ ಆರ್ಥಿಕವಾಗಿ ಶೈಕ್ಷಣಿಕವಾಗಿ ಔದ್ಯೋಗಿಕವಾಗಿ ಅಭಿವೃದ್ಧಿ ಹೊಂದಿದಾಗ ಮಾತ್ರ ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ ಈ ನಿಟ್ಟಿನಲ್ಲಿ ಮಹಿಳೆಯರ ಸರ್ವತೋಮುಖ ಅಭಿವೃದ್ಧಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶ್ರಮ ಮಹತ್ವರವಾದ್ದು ಎಂದು ಜಿ. ಆರ್ ಸೋನೆರ ಮಾಹಿತಿ ನೀಡಿದರು.
ಮಹಿಳೆಯರಿಗೆ ಇರಬೇಕಾದ ಪ್ರಾಥಮಿಕ ಕಾನೂನು ವಿಚಾರಗಳ ಬಗ್ಗೆ ಹಿಂಡಲಗಾ ಗಣಪತಿ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ತಾಲೂಕು ಮಟ್ಟದ ಮಹಿಳಾ ವಿಚಾರ ಗೋಷ್ಠಿ ಕಾರ್ಯಕ್ರಮ ಅಧ್ಯಕ್ಷತೆವಹಿಸಿ ಹಿರಿಯ ವಕೀಲರು ಬ್ಯಾಂಕ್ ಆಪ್ ಮಹಾರಾಷ್ಟ್ರ ಬ್ಯಾಂಕ್ ಕಾನೂನು ಸಲಹೆಗಾರರು ಆದ ಜಿ. ಆರ್ ಸೋನೆರ ರವರು ಮಾತಾಡಿದರು.
ಕಾರ್ಯಕ್ರಮವನ್ನು ದ್ವೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಬೆಳಗಾವಿ ಜಿಲ್ಲೆಯ ನಿರ್ದೇಶಕರಾದ ಸತೀಶ ನಾಯ್ಕ ರವರು ಮಾತನಾಡಿ ಯೋಜನೆಯ ಸಮಾಜದಲ್ಲಿ ಮಹಿಳೆಯರ ಸ್ವ ಉದ್ಯೋಗ ಕಂಡುಕೊಂಡು ಆರ್ಥಿಕ ಅಭಿವೃದ್ಧಿ ಹೊಂದುತ್ತಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಹಿಳಾ ಸಬಲೀಕರಣದ ಕುರಿತಂತೆ ರಾಣಿ ಚನ್ಮಮ್ಮಾ ವಿಶ್ಚ ವಿದ್ಯಾಲಯದ ಮರಾಠಿ ವಿಭಾಗದ ಉಪನ್ಯಾಸಕರಾದ ಮನಿಷಾ ರವರು ವಿಚಾರಗೊಷ್ಠೀ ಮಂಡಿಸಿದರು
ಸ್ವ ಉದ್ಯೋಗಕ್ಕೆ ಇರುವ ಅವಕಾಶಗಳ ಬಗ್ಗೆ ಡ್ಯಾಪೋಡೈಲ್ಸ್ ಸಂಸ್ಥೆಯ ನಿರ್ದೇಶಕರಾದ ಪದ್ಮಜಾ ಮಿಲಿಂದ ಮುತ್ತೇಕರ ರವರು ಮಹಿಳೆಯರಿಗೆ ಉದ್ಯೋಗ ಹೇಗೆ ಮಾಡಬೇಕು ಅದರ ಅವಕಾಶಗಳನ್ನು ಹೇಗೆ ಬಳಸಿಕೊಳ್ಳಬೇಕು ಹಾಗೂ ತಮ್ಮ ಸಂಸ್ಥೆ ಮುಖೇನ ಮಹಿಳೆಯರಿಗೆ ತರಬೇತಿಗಳನ್ನು ಒದಗಿಸಿಕೊಳ್ಳುವ ಬಗ್ಗೆ ತಿಳಿಸಿದರು.
ಜ್ಞಾನ ವಿಕಾಸ ಕಾರ್ಯಕ್ರಮದ ಯೋಜನಾಧಿಕಾರಿ ಶ್ರೀಮತಿ ಸಂಗೀತಾ ರವರು ಮಾತೃಶ್ರೀ ಅಮ್ಮನವರ ಉದ್ದೇಶಗಳ ಬಗ್ಗೆ ತಿಳಿಸಿದರು
ಶ್ರೀರಾಮ ಸೇನಾ ಜಿಲ್ಲಾ ಅಧ್ಯಕ್ಷರಾದ ರವಿಕುಮಾರ ಕೋಕಿತಕರ ರವರು ಮಹಿಳೆಯರಿಗೆ ಸಂಸ್ಕಾರಗಳ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದವರನ್ನು ತಾಲೂಕಿನ ಯೋಜನಾಧಿಕಾರಿ ನಾಗರಾಜ ಹದ್ಲಿ ಸ್ವಾಗತಿಸಿದರು ಕಾರ್ಯಕ್ರಮದಲ್ಲಿ ಜ್ಞಾನ ವಿಕಾಸಕೇಂದ್ರದ ಸದಸ್ಯರು ತಾಲೂಕಿನ ಸೇವಾಪ್ರತಿನಿಧಿಗಳು ವಲಯದ ಮೇಲ್ವಿಚಾರಕರಾದ ಕವಿತಾ, ಮಹಾಂತೇಶ ಹೊಸಮನಿ, ನೇತ್ರಾವತಿ ಹೆಬಸೂರ ನಾಗಪ್ಪಗೌಡ ಭಾಗವಹಿಸಿದ್ದರು
ವೈಶಾಲಿ ಪಟಗಾರ ಕಾರ್ಯಕ್ರಮದ ನಿರೂಪಿಸಿದರು, ಸಂಗೀತಾ ಪೂಜಾರ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ