Belagavi NewsBelgaum NewsKannada NewsKarnataka NewsPolitics

*ಖಾಸಗಿ ಸಂಘಕ್ಕೆ ಕನ್ನಡ ಭವನ ಹಸ್ತಾಂತರಿಸಿರುವ ಆರೋಪ: ಅಧ್ಯಕ್ಷರಿಗೆ ನೋಟಿಸ್ ಜಾರಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ಕನ್ನಡ ಭವನವನ್ನು ಖಾಸಗಿ ಸಂಘಕ್ಕೆ ಹಸ್ತಾಂತರಿಸಿದ ಆರೋಪದ ಹಿನ್ನೆಲೆಯಲ್ಲಿ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಅವರಿಗೆ ಕರ್ನಾಟಕ ಸಾಹಿತ್ಯ ಪತಿಷತ್ತು ನೋಟೀಸ್ ಜಾರಿ ಮಾಡಿದೆ.

ಬೆಳಗಾವಿಯ 9 ಕನ್ನಡಪರ ಸಂಘಟನೆಗಳು ನೀಡಿದ ದೂರಿನ ಮೇರೆಗೆ ರಾಜ್ಯ ಕಸಾಪ ಆಡಳಿತಾಧಿಕಾರಿ ಕೆ.ಎ. ದಯಾನಂದ ಅವರು ಈ ಕಠಿಣ ಕ್ರಮ ಕೈಗೊಂಡಿದ್ದಾರೆ. ಸುಮಾರು 75 ಕೋಟಿ ವೆಚ್ಚದ ಈ ಭವನವನ್ನು ನಿಯಮಬಾಹಿರವಾಗಿ ಖಾಸಗಿ ಸಂಸ್ಥೆಯೊಂದಕ್ಕೆ ವಹಿಸಿಕೊಟ್ಟಿರುವುದರಿಂದ ಪರಿಷತ್ತಿಗೆ ತಿಂಗಳಿಗೆ ಅಂದಾಜು 2 ಲಕ್ಷ ರೂ. ಬಾಡಿಗೆ ಆದಾಯ ನಷ್ಟವಾಗುತ್ತಿದೆ ಎಂದು ನೋಟೀಸ್‌ನಲ್ಲಿ ಉಲ್ಲೇಖಿಸಲಾಗಿದೆ.

ನಿಯಮಾವಳಿಗಳ ಸ್ಪಷ್ಟ ಉಲ್ಲಂಘನೆ ನಡೆಸಿರುವ ಹಿನ್ನೆಲೆಯಲ್ಲಿ “ನಿಮ್ಮ ವಿರುದ್ಧ ಯಾಕೆ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಬಾರದು?” ಎಂದು ಪ್ರಶ್ನಿಸಲಾಗಿದೆ. ಈ ಕುರಿತು ಏಳು ದಿನಗಳ ಒಳಗಾಗಿ ಸೂಕ್ತ ಸಮರ್ಥನೆ ನೀಡದಿದ್ದರೆ ಮುಂದಿನ ಕಾನೂನು ಕ್ರಮ ಜರುಗಿಸುವುದಾಗಿ ರಾಜ್ಯ ಕರ್ನಾಟಕ ಸಾಹಿತ್ಯ ಪರಿಷತ್ತು ಎಚ್ಚರಿಕೆ ನೀಡಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button