
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕಡಿಮೆ ತೂಕ ಹಾಗೂ ಉಸಿರಾಟದ ತೀವ್ರ ತೊಂದರೆಯಿಂದ ಬಳಲುತ್ತಿದ್ದ ೬ ತಿಂಗಳ ಅನಾಥ ಮಗುವನ್ನು ತಪಾಸಣೆಗಾಗಿ ಆಸ್ಪತ್ರೆಗೆ ಕರೆತಂದಾಗ ಪೇಟೆಂಟ್ ಡಕ್ಟಸ್ ಆರ್ಟೆರಿಯೊಸಸ್ (ಪಿಡಿಎ) ಎಂಬ ಹೃದಯ ಸಮಸ್ಯೆಯಿಂದ ಬಳಲುತ್ತಿರುವದು ಕಂಡುಬಂದಿತು.
ಇದು ಜನ್ಮತಃವಾಗಿಯೇ ಹೃದಯ ಸಮಸ್ಯೆಯನ್ನು ಹೊಂದಿತ್ತು.ಇದರಿಂದ ಹೃದಯಕ್ಕೆ ಸಂಪರ್ಕ ಕಲ್ಪಿಸುವ ಎರಡು ಪ್ರಮುಖ ಅಪಧಮನಿಗಳ ನಡುವೆ ಅಸಹಜ ರಕ್ತದ ಹರಿವು ಉಂಟಾಗಿ, ಶ್ವಾಸಕೋಶದಲ್ಲಿ ರಕ್ತದೊತ್ತಡದಿಂದ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಮಗುವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿಸಿ ಮಗುವಿನ ಪ್ರಾಣ ಉಳಿಸುವಲ್ಲಿ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗಾಉ ವೈದ್ಯಕೀಯ ಸಂಶೋಧನಾ ಕೇಂದ್ರದ ತಜ್ಞವೈದ್ಯರು ಯಶಸ್ವಿಯಾಗಿದ್ದಾರೆ.
ಶಸ್ತ್ರಚಿಕಿತ್ಸೆ ಮತ್ತು ತಂತ್ರ:
ಆಸ್ಟ್ರೇಲಿಯಾದಲ್ಲಿ ತರಬೇತಿ ಪಡೆದ ಮಕ್ಕಳ ಹೃದಯ ಶಸ್ತ್ರಚಿಕಿತ್ಸಕ ಡಾ.ಗಣಂಜಯ್ ಸಾಳ್ವೆ ಅವರು ಯಶ್ಸ್ವಿ ಶಸ್ತ್ರಚಿಕಿತ್ಸೆ ನಡೆಸಿದರು.
ಶಸ್ತ್ರಚಿಕಿತ್ಸೆಯ ನಂತರ ಮಗು ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದೆ. ಎಡ ಎದೆಯ ವಿಧಾನದ ಮೂಲಕ ನಿಯಂತ್ರಿತ ಹೈಪೊಟೆನ್ಷನ್ (ಕಡಿಮೆ ಬಿಪಿ) ಅಡಿಯಲ್ಲಿ ಪಿಡಿಎ ಅನ್ನು ಲಿಗೇಟ್ ಮಾಡಿ, ೨ ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನೆರವೇರಿಸಲಾಯಿತು.ಚಿಕಿತ್ಸೆಗೊಳಗಾಗದಿದ್ದರೆ ಪಿಡಿಎ ದೀರ್ಘಕಾಲದ ಶ್ವಾಸಕೋಶದ ಹಾನಿಗೆ ಕಾರಣವಾಗಬಹುದು. ಇದು ಶ್ವಾಸಕೋಶದ ರಕ್ತನಾಳಗಳನ್ನು ಸಹ ಹಾನಿಗೊಳಿಸುತ್ತದೆ. ಆದರೆ ಇದು ಸಾಮಾನ್ಯವಲ್ಲ ಏಕೆಂದರೆ ಶ್ವಾಸಕೋಶಗಳು ಮತ್ತು ರಕ್ತನಾಳಗಳು ಹಾನಿಗೊಳಗಾಗುವ ಮೊದಲು ಮಕ್ಕಳಿಗೆ ಚಿಕಿತ್ಸೆ ನೀಡಬೇಕು.
ರೋಟರಿ ಫೌಂಡೇಶನ್‌ನ ಗಿಫ್ಟ್ ಆಫ್ ಲೈಪ್ ಯೋಜನೆಯಡಿ ಹೃದಯ ತೊಂದರೆಯನ್ನು ಹೊಂದಿದ ಮಕ್ಕಳಿಗೆ ಧನಸಹಾಯ ನೀಡಲಾಗುತ್ತದೆ. ಈ ಯೋಜನೆಯಡಿ ಹೃದಯ ಚಿಕಿತ್ಸೆಯನ್ನು ಪಡೆದ ೬ನೇ ಮಗು ಇದು.
ಚಿಕ್ಕಮಕ್ಕಳ ತಜ್ಞ ವೈದ್ಯರಾದ ಡಾ.ಮನೀಶಾ ಭಾಂಡನಕರ, ಚಿಕ್ಕಮಕ್ಕಳ ಹೃದಯ ತಜ್ಞವೈದ್ಯರಾದ ಡಾ.ವೀರೇಶ ಮಾನ್ವಿ ಡಾ. ನಿಧಿ ಮಾನ್ವಿ ಗೋಯೆಲ್ ಅವರು ಚಿಕಿತ್ಸೆ ನೀಡಿದರೆ, ಶಸ್ತ್ರಚಿಕಿತ್ಸೆಗೆ ಡಾ. ಆನಂದ್ ವಘರಾಳಿ ಅವರು ಅರಿವಳಿಕೆ ನೀಡಿ ಸಹಕರಿಸಿದರು. ಶಸ್ತ್ರಚಿಕಿತ್ಸೆ ನೆರವೇರಿಸಿದ ವೈದ್ಯರ ತಂಡ ಹಾಗೂ ಉಚಿತ ಹೃದಯ ಶಸ್ತ್ರಚಿಕಿತ್ಸೆಗೆ ಧನಸಹಾಯ ನೀಡಿದ ರೋಟರಿ ಫೌಂಡೇಶನನ ಪದಾಧಿಕಾರಿಗಳಿಗೆ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ.ಕರ್ನಲ್ ಎಂ. ದಯಾನಂದ ಅವರು ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಕೆಎಲ್‌ಇ ಸಂಸ್ಥೆಯ ಡಾ ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಲಭ್ಯವಿರುವ ಸೌಲಭ್ಯಗಳು, ಪರಿಣ ತ ತಜ್ಞವೈದ್ಯರ ಸೇವೆಯನ್ನು ಸದುಪಯೋಗಪಡಿಸಿಕೊಳ್ಳುವಂತೆ ಮುಖ್ಯ ಹೃದಯ ಶಸ್ತ್ರಚಿಕಿತ್ಸಕರಾದ ಡಾ.ರಿಚರ್ಡ್ ಸಲ್ಡಾನ್ಹಾ ಕರೆ ನೀಡಿದರು. ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದ ವೈದ್ಯರ ತಂಡವನ್ನು ಕೆಎಲ್‌ಇ ಸಂಸ್ಥೆಯ ಕಾರ‍್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆ ಅವರು ಹಾಗೂ ಆಡಳಿತ ಮಂಡಳಿ ಸದಸ್ಯರು ಅಭಿನಂದಿಸಿದ್ದಾರೆ.
ಶಾಲಾ ಕೊಠಡಿ ಕಾಮಗಾರಿಗೆ ಪೂಜೆ ಸಲ್ಲಿಸಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್
https://pragati.taskdun.com/mla-lakshmi-hebbalkar-offered-pooja-for-school-room-work/