ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: “ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು ನೆಮ್ಮದಿ ತಂದಿವೆ. ಆದರೆ ಅಭಿವೃದ್ಧಿ ಎಂಬುದಕ್ಕೆ ಕೊನೆಯಿಲ್ಲ. ಅದಕ್ಕೆ ಮುಕ್ತಾಯವೆಂಬುದಿಲ್ಲ. ನಿರಂತರ ಅಭಿವೃದ್ಧಿಗೆ ನಾನು ಬದ್ಧವಾಗಿದ್ದು ಜನರ ಸಹಕಾರ ಅಗತ್ಯ” ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
ಅವರು ಬೆಳಗಾವಿ ಗ್ರಾಮೀಣ ಕ್ಷೇತ್ರದ ಕರಡಿಗುದ್ದಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಅರಿಷಿಣ-ಕುಂಕುಮ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಗ್ರಾಮಸ್ಥರ ಕುಶಲೋಪರಿ ವಿಚಾರಿಸಿ ಮಾತನಾಡಿದರು.
ಈ ಸಮಯದಲ್ಲಿ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕೆಲಸಗಳ ಮೆಲುಕು ಹಾಕಲಾಯಿತು. “ಜನತೆಯ ಪ್ರೀತಿ, ಪ್ರೋತ್ಸಾಹ, ಆಶೀರ್ವಾದಗಳ ಮೂಲಕ ಶಾಸಕಿಯಾಗಿ ನಿಸ್ವಾರ್ಥ ಭಾವನೆಯಿಂದ ನಿಮ್ಮೆಲ್ಲರ ಸೇವೆಗಳನ್ನು ಅಚ್ಚುಕಟ್ಟಾಗಿ ಮಾಡಿದ್ದೇನೆ. ಎಂದಿನಂತೆ ಎಲ್ಲರ ಪ್ರೀತಿ, ಪ್ರೋತ್ಸಾಹ, ಆಶೀರ್ವಾದ ಇರಲಿ” ಎಂದು ಲಕ್ಷ್ಮೀ ಹೆಬ್ಬಾಳಕರ ಕೋರಿದರು.
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಶಂಕರಗೌಡ ಪಾಟೀಲ, ಮಹಾಂತೇಶ ರಾಚಣ್ಣವರ, ಶಿವಾಜಿ ಕುರಿ, ಸೋಮಪ್ಪ ಮೂಕನವರ, ಅಂಜನಾ ಅರಬಳ್ಳಿ, ರೂಪಾ ಬೋರನ್ನವರ, ಪಾರವ್ವ ಅರಬಳ್ಳಿ, ಸದಾನಂದ ರಾಚನ್ನವರ, ರೂಪಾ ಸೊಗಲದ, ಸದಾಶಿವ ಮೂಕನವರ, ಹಾಲಪ್ಪ ನೇಸರಗಿ, ಮಲಗೌಡ ಪಾಟೀಲ, ಗಂಗಪ್ಪ ಮತ್ತಿಕೊಪ್ಪ, ಗೌಡಪ್ಪ ಪಾಟೀಲ, ಬಸವಣ್ಣೆಪ್ಪ ಅರಬಳ್ಳಿ, ಬಸವರಾಜ ರಾಚನ್ನವರ, ಅಶೋಕ ಮೂಕನವರ, ಶಂಕರ ಮುರಕಿಬಾವಿ, ಸಿದ್ದಪ್ಪ ಚೌಗುಲಾ, ನಾಗಪ್ಪ ಕುರಿ ಹಾಗೂ ನೂರಾರು ಗ್ರಾಮದ ಮಹಿಳೆಯರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ