Kannada NewsKarnataka NewsLatest

ಮಹಿಳೆಯರ ಹಿತ ಕಾಯಲು ಸದಾ ಬದ್ಧ: ಶಾಸಕಿ ಲಕ್ಷ್ಮೀ ಹೆಬ್ಬಾಳಕರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: “ಶಾಸಕಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಹಗಲಿರುಳು ಬೆಳಗಾವಿ ಗ್ರಾಮೀಣ ಕ್ಷೇತ್ರದ ಪ್ರತಿಯೊಂದು ಗ್ರಾಮಕ್ಕೆ ಅಭಿವೃದ್ಧಿಯ ಕೆಲಸಗಳನ್ನು ಹೊತ್ತು ತಂದಿದ್ದೇನೆ. ಪ್ರತಿಯೊಂದು ಗ್ರಾಮವನ್ನು ಸಮನಾಗಿ ನೋಡಿದ್ದೇನೆ. ವಿಶೇಷವಾಗಿ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು ಮಹಿಳೆಯರ ಹಿತ ಕಾಯಲು ಸದಾ ಬದ್ಧ,” ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.

 

ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಿಂಡಲಗಾ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಅರಿಷಿಣ ಕುಂಕುಮ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

“ಕ್ಷೇತ್ರದ ಜನತೆಯ ಪ್ರೀತಿ, ಪ್ರೋತ್ಸಾಹ, ಆಶೀರ್ವಾದಗಳ ಮೂಲಕ ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು ಇಡೀ ರಾಜ್ಯದಲ್ಲೇ ಎಲ್ಲರೂ ನೋಡುವಂತೆ ಮಾಡಲಾಗಿದೆ. ಒಬ್ಬ ಹೆಣ್ಣು ಮಗಳಾಗಿ ಹಲವಾರು ಕಷ್ಟಗಳನ್ನು ಎದುರಿಸಿ, ಎರಡು ಬಾರಿ ಚುನಾವಣೆಗಳಲ್ಲಿ ಸೋತರೂ ಛಲವನ್ನು ಬಿಡಲಿಲ್ಲ. ಬದಲಾಗಿ ಸೋಲುಗಳನ್ನೇ ನನ್ನ ಗೆಲುವಿನ ಮೆಟ್ಟಿಲುಗಳಾಗಿಸಿಕೊಂಡು ಇಂದು ಶಾಸಕಿಯಾಗಿ  ಕ್ಷೇತ್ರದ ಜನರ ಸೇವೆ ಮಾಡುತ್ತಿದ್ದೇನೆ,” ಎಂದರು.

ಕ್ಷೇತ್ರದ ಮಹಿಳೆಯರು ಯಾವ ಸಂದರ್ಭದಲ್ಲೂ ಯಾವುದೇ ಸೌಲಭ್ಯಗಳಿಂದ ವಂಚಿತರಾಗಬಾರದು. ಈ ನಿಟ್ಟಿನಲ್ಲಿ ಮಹಿಳೆಯರಿಗೆ ಅಗತ್ಯದ ಸೌಲಭ್ಯ, ನೆರವು ನೀಡುವ ಕಾರ್ಯವನ್ನು ಶಕ್ತಿ ಮೀರಿ ಮಾಡಲಾಗಿದೆ. ಇನ್ನು ಮುಂದೆಯೂ ಮಹಿಳೆಯರು ತಮ್ಮ ಸಮಸ್ಯೆಗಳ ಬಗ್ಗೆ ಗಮನ ಸೆಳೆದಲ್ಲಿ ಸೂಕ್ತ ಸ್ಪಂದನೆ ನೀಡಲಾಗುವುದು ಎಂದು ಅವರು ಹೇಳಿದರು.

ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ ಮಾತನಾಡಿದರು.

 

 

ಈ ಸಮಯದಲ್ಲಿ ಗ್ರಾಮದ ಹಿರಿಯರು, ಯುವರಾಜ ಕದಂ, ಹಾಗೂ ಗ್ರಾಮದ ಸಾವಿರಾರು ಮಹಿಳೆಯರು ಉಪಸ್ಥಿತರಿದ್ದರು.

ಹಂಡಿ ಭಡಂಗನಾಥ್ ಜೀ – ಸಹ್ಯಾದ್ರಿ ಶ್ರೇಣಿಯ ಸೌಂದರ್ಯ ಲೋಕ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button