Latest

ಭಾರತದಲ್ಲಿ ಫುಡ್ ಡೆಲಿವರಿ ಸೇವೆ ಸ್ಥಗಿತಗೊಳಿಸಲಿದೆ ಅಮೇಜಾನ್

ಪ್ರಗತಿವಾಹಿನಿ ಸುದ್ದಿ, ಮುಂಬೈ: ಅಮೆಜಾನ್ ತನ್ನ ಆಹಾರ ವಿತರಣಾ ಸೇವೆಯಾದ ಅಮೆಜಾನ್ ಫುಡ್ ಅನ್ನು ಡಿಸೆಂಬರ್ 29 ರಿಂದ ಸ್ಥಗಿತಗೊಳಿಸಲು ನಿರ್ಧರಿಸಿದೆ.

ಈ ವಿಷಯವನ್ನು ಅಮೇಜಾನ್ ಭಾರತದಲ್ಲಿನ ತನ್ನ ರೆಸ್ಟೋರೆಂಟ್ ಪಾಲುದಾರರಿಗೆ ತಿಳಿಸಿದೆ. 2020 ರ ಮೇ ತಿಂಗಳಲ್ಲಿ ಅಮೇಜಾನ್ ಈ ಸೇವೆಯನ್ನು ಪ್ರಾರಂಭಿಸಿತ್ತು. ದೇಶದಲ್ಲಿ ತನ್ನ ಆ್ಯಡ್ ಟೆಕ್ ಆರ್ಮ್ ಅಮೆಜಾನ್ ಅಕಾಡೆಮಿಯನ್ನು ಮುಚ್ಚಿದ ಒಂದು ದಿನದ ನಂತರ ಈ ವಿಷಯ ಬಹಿರಂಗಗೊಂಡಿದೆ.

ರೆಸ್ಟೋರೆಂಟ್ ಗಳಿಗೆ ನೀಡಬೇಕಾದ ಹಣಕ್ಕೆ ಸಂಬಂಧಿಸಿದಂತೆ ಮಾಡಿಕೊಂಡಿದ್ದ ಒಪ್ಪಂದಗಳಿಗೆ ತಾನು ಬದ್ಧವಾಗಿದ್ದು 2023ರ ಜನವರಿ 30ರವರೆಗೆ ರೆಸ್ಟೋರೆಂಟ್ ಗಳು ಎಲ್ಲ ದಾಖಲೆ ಮತ್ತು ಪರಿಕರಗಳನ್ನು ಒಪ್ಪಿಸುವಂತೆ ಅಮೇಜಾನ್ ತಿಳಿಸಿದೆ. ಇತರ ಯಾವುದೇ ಅನುಸರಣೆಗಳಿಗೆ ಸಂಬಂಧಿಸಿ ಮಾರ್ಚ್ 31ರವರೆಗೂ ತಾನು ಬೆಂಬಲ ನೀಡುವುದಾಗಿ ಕಂಪನಿ ತಿಳಿಸಿದೆ.

ಅಮೆಜಾನ್ ಇತ್ತೀಚೆಗೆ ಕಂಪನಿಯಾದ್ಯಂತ ಉದ್ಯೋಗಗಳನ್ನು ಕಡಿತಗೊಳಿಸಲು ಪ್ರಾರಂಭಿಸಿರುವುದನ್ನು ಸಹ ಇದೇ ವೇಳೆ ದೃಢಪಡಿಸಿದೆ.

Home add -Advt

“ನಾವು ಈ ನಿರ್ಧಾರಗಳನ್ನು ಲಘುವಾಗಿ ತೆಗೆದುಕೊಳ್ಳುವುದಿಲ್ಲ. ಪ್ರಸ್ತುತ ಗ್ರಾಹಕರು ಮತ್ತು ಪಾಲುದಾರರ  ಹಿತದೃಷ್ಟಿ ಪರಿಗಣಿಸಿ ನಾವು ಈ ಕಾರ್ಯಕ್ರಮಗಳನ್ನು ಹಂತ ಹಂತವಾಗಿ ಸ್ಥಗಿತಗೊಳಿಸುತ್ತಿದ್ದೇವೆ. ಈ ಪರಿವರ್ತನೆಯ ಸಮಯದಲ್ಲಿ ನಮ್ಮ ಬಾಧಿತ ಉದ್ಯೋಗಿಗಳನ್ನು ಕೂಡ  ಬೆಂಬಲಿಸುತ್ತಿದ್ದೇವೆ” ಎಂದು ಕಂಪನಿ ಹೇಳಿಕೊಂಡಿದೆ.

ಇನ್ನುಮುಂದೆ ಬಿಗ್ ಬಿ ಫೋಟೊ, ಧ್ವನಿ ಯಾವುದನ್ನೂ ಅವರ ಪರವಾನಗಿ ಇಲ್ಲದೆ ಬಳಸುವಂತಿಲ್ಲ

Related Articles

Back to top button