ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೇಂದ್ರ ಗೃಹ ಸಚಿವ ಅಮೀತ ಶಾ ಭಾನುವಾರ ಬೆಳಗಾವಿಯ ಜನಸೇವಕ ಸಮಾವೇಶಕ್ಕೆ ಆಗಮಿಸಲಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಭಾರಿ ಪೊಲೀಸ್ ಬಂಧೋಬಸ್ತ್ ಏರ್ಪಡಿಸಲಾಗಿದೆ. ಜೊತೆಗೆ ಸಂಚಾರ ಮಾರ್ಗಗಳನ್ನು ಬದಲಾಯಿಸಲಾಗಿದೆ.
ನೆಹರೂ ಕ್ರೀಡಾಂಗಣದಲ್ಲಿ ನಡೆಯುವ ಜನಸೇವಕ ಸಮಾವೇಶ ಸಮಾರಂಭ ದಲ್ಲಿ ಭಾಗವಹಿಸಲು ಬೆಳಗಾವಿ ನಗರಕ್ಕೆ ಆಗಮಿಸುವವರಿದ್ದು, ಅವರೊಂದಿಗೆ ಮುಖ್ಯಮಂತ್ರಿಗಳು, ಸಂಸದರು, ಶಾಸಕರು ಇನ್ನಿತರ ಕೇಂದ್ರ, ರಾಜ್ಯ ಸಚಿವರು, ಗಣ್ಯ ವ್ಯಕ್ತಿಗಳು ಸಹ ಆಗಮಿಸುವ ಹಿನ್ನೆಲೆಯಲ್ಲಿ ಸೂಕ್ತ ಮುಂಜಾಗೃತಾ ಮತ್ತು ಬಂದೋಬಸ್ತ್ ಏರ್ಪಡಿಸಲಾಗಿದೆ.
3 ಸಾವಿರಕ್ಕೂ ಹೆಚ್ಚು ಪೊಲೀಸ್ ಅಧಿಕಾರಿ, ಸಿಬ್ಬಂದಿ ಜೊತೆಗೆ 6ಕ್ಕೂ ಹೆಚ್ಚು ರಿಸರ್ವ್ ಪೊಲೀಸ್ ಪಡೆಗಳನ್ನು ಸಹ ನಿಯೋಜಿಸಲಾಗುತ್ತಿದೆ.
ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆ ಹಾಗೂ ವಿವಿಧ ವಿಶೇಷ ಘಟಕಗಳಿಂದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಆಗಮಿಸಿದ್ದು, ಈ ಕಾರ್ಯಕ್ರಮಕ್ಕೆ 1- ಪೊಲೀಸ್ ಕಮೀಷನರ್, 15- ಎಸ್‌ಪಿ, 53 -ಡಿಎಸ್‌ಪಿ, 118 -ಸಿಪಿಐ/ಪಿಐ, 235 -ಪಿಎಸ್‌ಐ, 350 -ಎಎಸ್‌ಐ ಮತ್ತು 2380 – ಹೆಚ್‌ಸಿ/ಪಿಸಿ ಕರ್ತವ್ಯ ನಿರ್ವಹಿಸಲಿದ್ದಾರೆ.
ಇಷ್ಟೇ ಅಲ್ಲ, ಇವರೊಂದಿಗೆ ವಿಶೇಷ ಘಟಕಗಳಾದ ಕೆಎಸ್‌ಆರ್‌ಪಿ, ಕೆಎಸ್‌ಐಎಸ್‌ಎಫ್-೧೬, ಎಎಸ್‌ಸಿ-೧೦, ಸಿಆರ್‌ಪಿಎಫ್, ಬಿಡಿಡಿಎಸ್, ಎಫ್‌ಪಿಬಿ, ಸಿಐಡಿ, ರಾಜ್ಯಗುಪ್ತವಾರ್ತೆ, ಇಂಟರನಲ್ ಸೆಕ್ಯುರಿಟಿ ಘಟಕದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಸಹ ನಿಯೋಜಿಸಲಾಗಿದೆ.
ನಗರದಲ್ಲಿ ಸುಗಮ ವಾಹನ ಸಂಚಾರಕ್ಕಾಗಿ ಎಲ್ಲ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಿ, ವಾಹನಗಳ ಸಂಚಾರದಲ್ಲಿ ಮಾರ್ಗ ಬದಲಾವಣೆ ಮಾಡಿದ್ದು, ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ಸಾರ್ವಜನಿಕರಲ್ಲಿ ಕೋರಲಾಗಿದೆ.
ಪಾರ್ಕಿಂಗ್, ಸಂಚಾರ ಮಾರ್ಗ ಹೇಗಿರುತ್ತೆ? ಇಲ್ಲಿ ಕ್ಲಿಕ್ ಮಾಡಿ – ಅಮಿತ್ ಶಾ ಕಾರ್ಯಕ್ರಮಕ್ಕೆ ಬರುವವರಿಗೆ, ಬಾರದವರಿಗೆ ಸಂಚಾರ ಮಾರ್ಗ ಸೂಚನೆ
ಅಮಿತ್ ಶಾ ರಾಜ್ಯ ಪ್ರವಾಸ ಪಟ್ಟಿ : ಬೆಳಗಾವಿಯಲ್ಲಿ 4 ಕಾರ್ಯಕ್ರಮ
ಅಮಿತ್ ಶಾ ಕಾರ್ಯಕ್ರಮ: ಹೇಗಿರುತ್ತೆ ಪೊಲೀಸ್ ಬಂದೋಬಸ್ತ್ ನೋಡಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ