ಸಂಸದ ಅಣ್ಣಾಸಾಹೇಬ ಜೋಲ್ಲೆ ಅವರ ಸ್ಥಳೀಯ ಕ್ಷೇಮಾಭಿವೃದ್ಧಿ ಯೋಜನೆಯ ಅನುದಾನದಲ್ಲಿ ಅಂಬುಲೆನ್ಸ್ ಮಂಜೂರು
ಪ್ರಗತಿವಾಹಿನಿ ಸುದ್ದಿ, ಮುಗಳಖೋಡ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸ್ಥಳೀಯ ಕ್ಷೇಮಾಭಿವೃದ್ಧಿ ಯೋಜನೆಯ ಅನುದಾನದಲ್ಲಿ ಸಂಸದರು ಉದ್ಯೋಗಪತಿಗಳು ಅಣ್ಣಾಸಾಹೇಬ ಜೊಲ್ಲೆಯವರು ಮುಗಳಖೋಡ ಸಮುದಾಯ ಆರೋಗ್ಯ ಕೇಂದ್ರಕ್ಕೆ ಅಂಬುಲೆನ್ಸ್ ಮಂಜೂರು ಮಾಡಿದ್ದಾರೆ.
ಸಂಸದರಲ್ಲಿ ಹಲವು ಬಾರಿ ನಾವು ಮನವಿಯನ್ನು ಮಾಡಿಕೊಂಡಿದ್ದೀವಿ. ಬಹುದಿನಗಳ ಬೇಡಿಕೆಯನ್ನು ಸಂಸದರು ಈಡೇರಿಸಿದ್ದಾರೆ. ಅವರಿಗೆ ಅಭಿನಂದನೆಗಳು, ಮುಗಳಖೋಡ ಪಟ್ಟಣವು ಸೇರಿದಂತೆ ಸುತ್ತಲಿನ ಗ್ರಾಮಗಳಿಗೆ ಬಹುದಿನಗಳ ಬೇಡಿಕೆಯು ನನಸಾಗಿದೆ. ಸಾರ್ವಜನಿಕರು ಈ ಅಂಬುಲೆನ್ಸ್ ದ ಸದುಪಯೋಗವನ್ನು ಪಡೆಯಬೇಕೆಂದು ಬಿಜೆಪಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ ಖೇತಗೌಡರ ಹೇಳಿದರು.
ಅವರು ಗುರುವಾರ ಮುಂಜಾನೆ 11 ಗಂಟೆಗೆ ಮುಗಳಖೋಡ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಂಸದರ ವಿಶೇಷ ಅನುದಾನದ ಅಡಿಯಲ್ಲಿ ಮಂಜೂರಾಗಿರುವ ಅಂಬುಲೆನ್ಸ್ ಪೂಜಾ ಸಮಾರಂಭದಲ್ಲಿ ಮಾತನಾಡಿದರು
ಪುರಸಭೆಯ ಸದಸ್ಯ ಹಾಲಪ್ಪ ಶೇಗುಣಸಿ ಪೂಜೆಸಲ್ಲಿಸಿದರು. ಕುಡಚಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಖಾನಗೌಡರ ರಿಬ್ಬನ್ ಕಟ್ ಮಾಡಿ ಅಂಬುಲೆನ್ಸ ಸಂಚಾರಕ್ಕೆ ಚಾಲನೆ ನೀಡಿದರು.
ಬಿಜೆಪಿ ಕುಡಚಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಖಾನಗೌಡರ ಮಾತನಾಡುತ್ತ ಮುಗಳಕೋಡ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಬೇಡಿಕೆಗಳಲ್ಲಿ ಅಂಬುಲೆನ್ಸ್ ಆಸ್ಪತ್ರೆಗೆ ಬೇಕು ಅನ್ನುವಂಥ ಬಹುದಿನಗಳ ಬೇಡಿಕೆಯಾಗಿತ್ತು ಇವತ್ತು ಮಾನ್ಯ ಸಂಸದರು ಅಣ್ಣಾಸಾಹೇಬ್ ಜೋಲ್ಲೆಯವರು ಈಡೇರಿಸಿದ್ದಾರೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿಯ ಚಿಕ್ಕೋಡಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ ಖೇತಗೌಡರ, ಪುರಸಭೆಯ ಸದಸ್ಯರಾದ ಕೆಂಪಣ್ಣ ಅಂಗಡಿ, ಮಾಹಾಂತೇಶ ಯರಡೆತ್ತಿ, ಪರಶುರಾಮ ಕಡಕೋಳ, ರಾಜಶೇಖರ ನಾಯಿಕ, ಮಂಗಲಾ ಪಣದಿ, ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಲತಾ ಹುದ್ದಾರ, ಅನ್ನಪೂರ್ಣ ಯಾರಡೆತ್ತಿ, ಡಾಕ್ಟರ: ರಾಜೇಶ್ವರಿ ಮೇಲಾಪುರೆ, ರಾಮಪ್ಪ ಕೇತಗೌಡರ, ಗೋಪಾಲ ಗೋಕಾಕ, ಗೌಡಪ್ಪ ಕೇತಗೌಡರ, ಕೆಂಪಣ್ಣ ಮುಸಿ, ಅಗ್ರಾಣಿ ಶೇಗುಣಸಿ, ಸಚಿನ ಪ್ರಧಾನಿ, ಸಂಸದರ ಆಪ್ತ ಸಹಾಯಕ ಮಾರುತಿ ಹೊಸಪೇಟಿ, ರಾವಸಾಬ ಐಗಳಿ, ರಾಜು ಗಸ್ತಿ, ಶಿವಾನಂದ ಅಂದಾನಿ, ಅಮೃತ ದಳವಾಯಿ, ಶಿವಾನಂದ ಬೆಂಡವಾಡ, ಈರಪ್ಪ ಮಡಿವಾಳ, ಸುಭಾಸ ಮಾಳಿ ಇತರರು ಇದ್ದರು.
https://pragati.taskdun.com/politics-2/parishat-election-bjp-meeting/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ