ಪ್ರಗತಿವಾಹಿನಿ ಸುದ್ದಿ, ನಾಗ್ಪುರ: ಹಿಂಡಲಗಾ ಜೈಲಿನಲ್ಲೇ ಕುಳಿತು ಕೈದಿಯೊಬ್ಬ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಹಣಕ್ಕಾಗಿ ಬೇಡಿಕೆಯಿಟ್ಟು ಜೀವಬೆದರಿಕೆ ಒಡ್ಡಿರುವ ಸಂಗತಿ ಬೆಳಕಿಗೆ ಬಂದಿದೆ.
ಭೂಗತ ಪಾತಕಿ ದಾವೂದ್ ಇಬ್ರಾಹಿಂ ಹೆಸರಿನಲ್ಲಿ ಬೆದರಿಕೆಯೊಡ್ಡಿರುವ ಆರೋಪಿ, 100 ಕೋಟಿ ರೂ. ನೀಡುವಂತೆ ಕೇಳಿದ್ದಾಗಿ ಮೂಲಗಳು ತಿಳಿಸಿವೆ.
ಗಡ್ಕರಿ ಅವರ ನಾಗ್ಪುರದ ಖಮ್ಲಾದಲ್ಲಿರುವ ಸಾರ್ವಜನಿಕ ಸಂಪರ್ಕ ಕಚೇರಿ ಸ್ಥಿರ ದೂರವಾಣಿಗೆ ಶನಿವಾರ ಬೆಳಗ್ಗೆ 11.25ಕ್ಕೆ, 11.32ಕ್ಕೆ ಹಾಗೂ ಮಧ್ಯಾಹ್ನ 12.30ಕ್ಕೆ ಹೀಗೆ ಮೂರು ಬಾರಿ ಕರೆ ಮಾಡಲಾಗಿದೆ. ತಾನು ಕರ್ನಾಟಕದಲ್ಲಿ ಇರುವುದಾಗಿ ಹೇಳಿಕೊಂಡ ಆರೋಪಿ ತನ್ನ ವಿಳಾಸ, ಮೊಬೈಲ್ ಸಂಖ್ಯೆ ಎಲ್ಲವನ್ನೂ ನೀಡಿದ್ದ ಎನ್ನಲಾಗಿದೆ.
ಇದರ ಜಾಡು ಹಿಡಿದು ತನಿಖೆಗೆ ಹೊರಟ ಪೊಲೀಸರಿಗೆ ಬೆಳಗಾವಿಯ ಹಿಂಡಲಗಾ ಜೈಲಿನಿಂದ ಕರೆ ಹೋಗಿರುವುದು ತಿಳಿದು ಬಂದಿದ್ದು ಕರೆ ಮಾಡಿದಾತ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿರುವ ಆರೋಪಿ ಎಂದು ಗೊತ್ತಾಗಿದೆ.
ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಪೊಲೀಸರು ಹಿಂಡಲಗಾ ಜೈಲಿಗೆ ಆಗಮಿಸಿ ತನಿಖೆ ಕೈಗೊಂಡಿದ್ದು ನಿತಿನ್ ಗಡ್ಕರಿ ಅವರ ಕಚೇರಿ ಹಾಗೂ ನಿವಾಸಕ್ಕೂ ಭದ್ರತೆ ಬಿಗುಗೊಳಿಸಲಾಗಿದೆ.
ಇನ್ನೊಂದೆಡೆ ಜೈಲಿನಲ್ಲಿ ಕೈದಿಗೆ ಮೊಬೈಲ್ ಫೋನ್ ಬಳಕೆಗೆ ಅವಕಾಶ ಹೇಗೆ ಸಿಕ್ಕಿತು ಎಂಬ ಬಗ್ಗೆಯೂ ತನಿಖೆ ಮುಂದುವರಿದಿದ್ದು ಕರ್ನಾಟಕ ಪೊಲೀಸರೂ ವಿಷಯದ ಾಳಕ್ಕೆ ಕೈಹಾಕಿದ್ದಾರೆ.
ಎಚ್. ನಾಗೇಶ, ವೈಎಸ್ ವಿ ದತ್ತ ಸೇರಿದಂತೆ ಹಲವರು ಕೈ ತೆಕ್ಕೆಗೆ
https://pragati.taskdun.com/h-nagesh-ys-v-dutta-and-many-others-joined-congress/
https://pragati.taskdun.com/girl-died-previous-day-of-her-marriage/
*ಪಂಚಮಸಾಲಿ ಸಮುದಾಯಕ್ಕೆ ಸಿಎಂ ಬೊಮ್ಮಾಯಿ ಭರವಸೆ*
https://pragati.taskdun.com/cm-bommayi-inogarated-raitha-samavesha-in-harihara/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ