ಪ್ರಗತಿವಾಹಿನಿ ಸುದ್ದಿ, ಬೆೆಂಗಳೂರು:
ವಿಜಯನಗರ ಶಾಸಕ ಆನಂದ ಸಿಂಗ್ ರಾಜಿನಾಮೆ ಕುರಿತು ಗೊಂದಲ ಮುಂದುವರಿಯುತ್ತಿರುವಂತೆಯೇ ಅವರು ರಾಜ್ಯಪಾಲರ ಭೇಟಿಗಾಗಿ ರಾಜಭವನದತ್ತ ತೆರಳಿದ್ದಾರೆ.
ಆನಂದ ಸಿಂಗ್ ಶಾಸಕಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ ಎನ್ನುವ ಸುದ್ದಿ ಇಂದು ಬೆಳಗ್ಗೆಯಿಂದಲೇ ಹರಡಿದ್ದು, ಅದನ್ನು ಯಾರೂ ಖಚಿತಪಡಿಸಿಲ್ಲ. ಸ್ಪೀಕರ್ ರಮೇಶ ಕುಮಾರ ಕೂಡ ಈ ಬಗ್ಗೆ ಅಡ್ಡ ಗೋಡೆಯ ಮೇಲೆ ಗೋಡೆ ಇಟ್ಟಂತೆ ಮಾತನಾಡಿದ್ದಾರೆ. ಆನಂದ ಸಿಂಗ್ ಕೂಡ ಯಾರಿಗೂ ಸಿಗುತ್ತಿಲ್ಲ.
ಈ ಮಧ್ಯೆ ಆನಂದ ಸಿಂಗ್ ಇದೀಗ ರಾಜ್ಯಪಾಲರ ಭೇಟಿಗೆ ಹೊರಟಿದ್ದಾರೆ. ಜಿಂದಾಲ ಕಂಪನಿಗೆ ಭೂಮಿ ನೀಡುವ ವಿಷಯವಾಗಿ ಅಸಮಾಧಾನಗೊಂಡಿದ್ದೇ ಆನಂದ ಸಿಂಗ್ ರಾಜಿನಾಮೆಗೆ ಕಾರಣ ಎನ್ನಲಾಗುತ್ತಿದೆ.
ಈ ಕುರಿತು ಬಿಜೆಪಿ ರಾಜ್ಯಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಹ ಮಾತನಾಡಿದ್ದು, ಆನಂದ ಸಿಂಗ್ ರಾಜಿನಾಮೆ ವಿಚಾರ ತಮಗೆ ಗೊತ್ತಿಲ್ಲ. ಆದರೆ ರಾಜ್ಯದ ಸಮ್ಮಿಶ್ರ ಸರಕಾರದಲ್ಲಿ ಗೊಂದಲವಂತೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದಿದ್ದಾರೆ.
ಈ ಮಧ್ಯೆ ಅಮೇರಿಕಾದಿಂದ ಟ್ವೀಟ್ ಮಾಡಿರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ನಾನು ಎಲ್ಲವನ್ನೂ ಗಮನಿಸುತ್ತಿದ್ದೇನೆ. ಬಿಜೆಪಿ ಸರಕಾರದಲ್ಲಿ ಗೊಂದಲ ಮೂಡಿಸಲು ಪ್ರಯತ್ನಿಸುತ್ತಿದೆ. ಅಧಿಕಾರಕ್ಕೆ ಬರುವುದು ಬಿಜೆಪಿಯ ಹಗಲುಗನಸು ಎಂದಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ