GIT add 2024-1
Beereshwara 33

*ಕೇಂದ್ರ ಸರ್ಕಾರದ ಯೋಜನೆಗಳನ್ನು ಸಮಾಜದ ಕಟ್ಟಕಡೆಯ ಜನರಿಗೆ ತಲುಪಿಸಲು ಅಣ್ಣಾಸಾಹೇಬ‌ ಜೊಲ್ಲೆಯವರನ್ನು ಗೆಲ್ಲಿಸಿ :ಶಾಸಕಿ ಶಶಿಕಲಾ ಜೊಲ್ಲೆ*

Anvekar 3
Cancer Hospital 2

ಪ್ರಗತಿವಾಹಿನಿ ಸುದ್ದಿ: ಕೇಂದ್ರ ಸರ್ಕಾರ ಪ್ರತಿಯೊಂದು ಯೋಜನೆಗಳನ್ನು ಸಮಾಜದ ಕಟ್ಟಕಡೆಯ ಜನರಿಗೆ ತಲುಪಿಸುವ ಸಲುವಾಗಿ ಅಣ್ಣಾಸಾಹೇಬ ಜೊಲ್ಲೆಯವರನ್ನು ಮತ್ತೋಮ್ಮೆ ಗೆಲ್ಲಿಸಿ ಎಂದು ಮಾಜಿ ಸಚಿವೆ,ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.

Emergency Service

ಚಿಕ್ಕೋಡಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಇಂಗಳಿ, ಮಾಂಜರಿ, ಯಡೂರ,ಚಂದೂರ ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ‌ ಜೊಲ್ಲೆಯವರ ಪ್ರಚಾರರ್ಥವಾಗಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಕೇಂದ್ರ ಸರ್ಕಾರ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹತ್ತುಹಲವಾರು ಯೋಜನೆಗಳನ್ನು ರೂಪಿಸಿದೆ. ಈ ಹಿನ್ನೆಲೆಯಲ್ಲಿ ಸಂಸದ ಅಣ್ಣಾಸಾಹೇಬ‌ ಜೊಲ್ಲೆಯವರನ್ನು ಮತ್ತೊಮ್ಮೆ ಸಂಸದರಾಗಿ ಮಾಡಲು ಕಾರ್ಯಕರ್ತರು ಪ್ರಾಮಾಣಿಕ ಶ್ರಮಿಸಬೇಕು ಎಂದರು.ಅಣ್ಣಾಸಾಹೇಬ‌ ಜೊಲ್ಲೆಯವರ ಜೊಲ್ಲೆ ಗ್ರುಪನ ಮೂಲಕ ಗ್ರಾಮೀಣ ನಿರುದ್ಯೋಗ 4 ಸಾವಿರ ಯುವಕ-ಯುವತಿಯರಿಗೆ ಉದ್ಯೋಗವನ್ನು ನೀಡಿದ್ದಾರೆ.‌ ರಾಜಕೀಯ ಬಿಟ್ಟು ಸಾಮಾಜಿಕವಾಗಿ ಅಣ್ಣಾಸಾಹೇಬ‌ ಜೊಲ್ಲೆಯವರು ಕೆಲಸ ಮಾಡುತ್ತಿದ್ದಾರೆ.ಅದಲ್ಲದೆ‌ ಕೇಂದ್ರ ಸರ್ಕಾರದ ಪ್ರತಿಯೊಂದು ಯೋಜನೆಯನ್ನು ಚಿಕ್ಕೋಡಿ ಕ್ಷೇತ್ರದಲ್ಲಿ ತಂದು ಇಡೀ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಎಷ್ಟೇ ಯಾರೇ ಅಪಪ್ರಚಾರ ಮಾಡಿದರು ಅದಕ್ಕೆ ತೆಲೆಗೊಡದೆ ಕಮಲದ ಚಿಹ್ನೆಗೆ ಮತ ನೀಡಿ ಮತ್ತೋಮ್ಮೆ ಅಣ್ಣಾಸಾಹೇಬ‌ ‌ಜೊಲ್ಲೆಯವರನ್ನು ಗೆಲ್ಲಿಸಿ ಎಂದರು.

ನಾನು ಮುಜರಾಯಿ ಸಚಿವರಾಗಿದ್ದ ಇಂಗಳಿ ಗ್ರಾಮಕ್ಕೆ ವಿವಿಧ ದೇವಸ್ಥಾನಕ್ಕೆ ಅನುದಾನ ನೀಡಿದೇನೆ‌.ಪ್ರಧಾನಿ ಮೊದಿಯವರು ಭಾರತ ಮಾತೆಗೋಸ್ಕರ ದುಡಿಯುತ್ತಿದ್ದಾರೆ.ಇಡೀ ಭಾರತ ದೇಶವನ್ನು ಮೋದಿಯವರು ಕುಟುಂಬದಂತೆ ನೋಡಿಕೊಳ್ಳುತ್ತಿದ್ದಾರೆ.ಕಿಸಾನ ಸನ್ಮಾನ,ಉಜ್ವಲಾ ಯೋಜನೆಯ ಮೂಲಕ‌ ಉಚಿತವಾಗಿ ಗ್ಯಾಸ್ ಸಿಲಿಂಡರಗಳ ವಿತರಣೆ,ದೇಶದ ಸುರಕ್ಷತೆ,ಬಡವರ ಚಿಕಿತ್ಸೆಗಾಗಿ ಆಯುಷ್ಮಾನ ಕಾರ್ಡಗಳ ವಿತರಣೆ ಸೇರಿದಂತೆ ಹಲವು ಜನರಪರ ಯೊಜನೆಯ‌ ಮೂಲಕ ಜನರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದ್ದಾರೆ ಎಂದರು.

Laxmi Tai add
Bottom Add3
Bottom Ad 2